ಚಿತ್ರದುರ್ಗ: ಲಿಂಗೈಕ್ಯರಾಗಿರುವ ಮಾತೆ ಮಹಾದೇವಿ 1946ರ ಮಾ.13ರಂದು ಬಸಪ್ಪ & ಗಂಗಮ್ಮ ದಂಪತಿಯ ಪುತ್ರಿಯಾಗಿ ಚಿತ್ರದುರ್ಗದ ಸಾಸಲಹಟ್ಟಿಯಲ್ಲಿ ಜನಿಸಿದ್ದರು. 

ಲಿಂಗಾಯತ ಸಮುದಾಯದವರಾಗಿದ್ದ ಇವರು, ಬಿ.ಎಸ್ಸಿ, ಎಂ.ಎ ಅಭ್ಯಸಿಸಿದ ಬಳಿಕ 1966ರ ಏ.5ರಂದು ಲಿಂಗಾನಂದ ಮಹಾಸ್ವಾಮಿ ಅವರಿಂದ ದೀಕ್ಷೆ ಪಡೆದರು. ಇದರೊಂದಿಗೆ ದಕ್ಷಿಣ ಭಾರತದ ಮೊದಲ ಮಹಿಳಾ ಜಗದ್ಗುರು ಎನಿಸಿಕೊಂಡಿದ್ದರು. 

ಇವರು ಶರಣ ಧರ್ಮ ಪ್ರಚಾರಕ್ಕಾಗಿ ಕೂಡಲಸಂಗಮದಲ್ಲಿ ಪ್ರತೀ ವರ್ಷ ಶರಣ ಸಮ್ಮೇಳನ ಆಯೋಜಿಸುತ್ತಿದ್ದರು. ಇವರ ಅಂಕಿತನಾಮ ಸಚ್ಚಿದಾನಂದ.