ಚಿತ್ರದುರ್ಗ: ರಾತ್ರಿಯಿಡಿ ಶಿವನನ್ನು ಧ್ಯಾನಿಸುವ ಮಹಾಶಿವರಾತ್ರಿ ಪ್ರಯುಕ್ತ ಕೆಳಗೋಟೆ ಸಿ.ಕೆ.ಪುರದಲ್ಲಿರುವ ಬೇಡರ ಕಣ್ಣಪ್ಪ ದೇವಸ್ಥಾನದಲ್ಲಿ ಸೋಮವಾರ ಅಭಿಷೇಕದ ನಂತರ ವಿಶೇಷವಾಗಿ ಅಲಂಕರಿಸಿ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನ ಕಮಿಟಿಯ ಅಧ್ಯಕ್ಷ ಬಿ.ಪಾಪನಾಯಕ, ನಗರಸಭೆ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಭೀಮಣ್ಣ, ಮಲ್ಲಿಕಾರ್ಜುನ್, ಚಂದ್ರಶೇಖರ್, ರಾಜಣ್ಣ, ಮಂಜಣ್ಣ, ಓಬಣ್ಣ ಇವರುಗಳು ಪೂಜೆಯ ಉಸ್ತುವಾರಿ ವಹಿಸಿದ್ದರು.
ಜೆ.ಡಿ.ಎಸ್.ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ ಸೇರಿದಂತೆ ನೂರಾರು ಭಕ್ತರು ಬೇಡರ ಕಣ್ಣಪ್ಪನ ದರ್ಶನ ಪಡೆದರು.