ಚಿತ್ರದುರ್ಗ: ಮರಗಾಲು ಕುಣಿತ ಚಿತ್ರದುರ್ಗದಲ್ಲಿ ಪಾಳೇಗಾರರ ಕಾಲದಿಂದಲೂ ಅಂದರೆ ಸುಮಾರು ಐದುನೂರು ವರ್ಷಗಳಿಂದಲೂ ಬೆಳೆದುಬಂದಿರುವ ಪಾರಂಪರಿಕ ಜಾನಪದ ನೃತ್ಯ ಕಲೆ. ಇದು ಗರುಡಿ ಮನೆಯ ಪೈಲ್ವಾನರುಗಳ ಸಾಂಸ್ಕೃತಿಕ ಕಲೆ ಎಂದು ಸಹ ಕರಯುತ್ತಾರೆ.

ರಾಮನವಮಿ ಪ್ರಯುಕ್ತ ಜಿಲ್ಲಾ ಜಾನಪದ ಕಲಾ ಮಂಡಲ(ರಿ). ಚಿತ್ರದುರ್ಗ ಇವರಿಂದ ಮಾ-೨೫ ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿತ್ರದುರ್ಗ ಇವರ ಪ್ರಾಯೋಜನೆಯಿಂದ ಚಳ್ಳಕೆರೆ ತಾಲ್ಲೂಕು ಪಿ. ಮಹದೇವಪುರ ಗ್ರಾಮದಲ್ಲಿ ನಡೆಸಿದ ರಥೋತ್ಸವದ ಜಾತ್ರಾ ಕಾರ್ಯಕ್ರಮದಲ್ಲಿ ನಡೆಸಲಾಗುತ್ತದೆ.

ಬಿಳೀ ಪಂಚೆ, ಕಲರ್ ಜುಬ್ಬಾ, ಕಲರ್ ಪೇಟ ತೊಟ್ಟ ಕಲಾವಿದರು ಐದರಿಂದ ಎಂಟು ಅಡಿ ತನಕ ಇರುವ ಮರಗಾಲುಗಳನ್ನು ಕಾಲಿಗೆ ಕಟ್ಟಿಕೊಂಡು ಕುಣಿಯುತ್ತಾ ನಡೆಯುತ್ತಾರೆ. ಅದೂ ಎಂಟರಿಂದ ಹತ್ತು ಕಿ.ಮೀ ವರೆಗೆ. ವೇದಿಕೆ ಕಾರ್ಯಕ್ರಮ ಸಹ ಪ್ರದರ್ಶಿಸುತ್ತಾರೆ. ಮರಗಾಲು ಕುಣಿತ ಪ್ರತಿ ವರ್ಷ ಮೈಸೂರು ದಸರಾ, ಹಂಪಿ ಉತ್ಸವ, ಕರಾವಳಿ ಉತ್ಸವ, ಚಾಲುಕ್ಯ ಉತ್ಸವ, ಚಿತ್ರದುರ್ಗ ಉತ್ಸವ, ತುಮಕೂರು ಉತ್ಸವ, ದಾವಣಗೆರೆ ಉತ್ಸವ, ಲಕ್ಕುಂಡಿ ಉತ್ಸವ, ಬೀದರ್ ಉತ್ಸವ ಮುಂತಾದ ಕಡೆಗಳಲ್ಲಿ ಪ್ರದರ್ಶಿಸುತ್ತಾ ಬಂದಿದ್ದಾರೆ.

ಮರಗಾಲು ಕುಣಿತದಲ್ಲಿ ಕಲಾವಿದರುಗಳಾದ ಜಿ.ಗಿರೀಶ್, ಆರ್.ಅಮೋಘವರ್ಷ, ಆರ್.ಅರುಣ್‌ಕುಮಾರ್, ಗೋವಿಂದಪ್ಪ, ಜೆ.ಎ. ಭುವನ, ಎಸ್.ಆರ್. ಮನು, ಗಿರಿತಿಮ್ಮಪ್ಪ, ಅಜೇಯ ಸಾಂಚಿ, ಎಸ್. ರಾಜಪ್ಪ, ಆರ್. ಅಭಿಲಾಶ್, ಎಸ್.ಉಮಾಪತಿ, ಯು. ದರ್ಶನ, ಎಸ್. ಮಧುಸೂಧನ, ಸಿ. ಕೆಂಚೇಶ್, ಹನುಮಂತಪ್ಪ ಮುಂತಾದವರು ಭಾಗವಹಿಸಿ ಪ್ರದರ್ಶನ ನೀಡಿರುತ್ತಾರೆ.