ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಸಿಂಗಟಗೆರೆ ಸಮೀಪದ ತೋಟದ ಮನೆಗೆ ಕರಡಿ ನುಗ್ಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮಸ್ಥರ ಸಹಾಯದಿಂದ ಭಾನುವಾರ ಸಂಜೆ ಕರಡಿಯನ್ನು ಸೆರೆ ಹಿಡಿದ್ದಾರೆ.

ವಲಯ ಅರಣ್ಯಾಕಾರಿ ತನುಜಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಸಿಂಗಟಗೆರೆ ಗ್ರಾಮದ ಸಮೀಪದಲ್ಲಿರುವ ಬೀರಮ್ಮ ನಿಂಗಪ್ಪ ಎಂಬುವರ ತೋಟದ ಮನೆಯಲ್ಲಿ ನೂತನವಾಗಿ ಕಟ್ಟಿಸುತ್ತಿದ್ದ ಮನೆಯಲ್ಲಿ ಭಾನುವಾರ ಕರಡಿಯೊಂದು ಬಂದು ಸೇರಿಕೊಂಡಿತ್ತು.