ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಮತ್ತೋಡಿನಲ್ಲಿ ಸೆಪ್ಟೆಂಬರ್ 09 ರಂದು 54 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.

 ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 16.4 ಮಿ.ಮೀ. ಶ್ರೀರಾಂಪುರ 28, ಮಾಡದಕೆರೆ 32. ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮುರು 10.6, ಬಿಜಿ.ಕೆರೆ 3, ರಾಂಪುರ 10.2, ದೇವಸಮುದ್ರ 15, ರಾಯಾಪುರ 8.8.

ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-01 ರಲ್ಲಿ 11, ಚಿತ್ರದುರ್ಗ-02 ರಲ್ಲಿ 6.9, ಹಿರೇಗುಂಟನೂರು 2, ಐನಹಳ್ಳಿ 2, ಭರಮಸಾಗರ 32, ಸಿರಿಗೆರೆ 9.2, ತುರುವನೂರು 2.2.

ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 3.4, ಪರುಶುರಾಂಪುರ 32, ನಾಯಕನಹಟ್ಟಿ 2.2,  ದೇವರಮರಿಕುಂಟೆ 33.4, ತಳಕು 33.4. ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 21.2, ಬಬ್ಬೂರು 32, ಈಶ್ವರಗೆರೆ 10.8, ಇಕ್ಕನೂರು 13, ಸುಗೂರು 36. ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 23.4, ರಾಮಗಿರಿ 12, ಬಿ.ದುರ್ಗ 38, ಹೆಚ್.ಡಿ ಪುರ 38, ತಾಳ್ಯದಲ್ಲಿ 7 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.