ಚಿತ್ರದುರ್ಗ: ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿಯೂ ಮಕ್ಕಳು ತೊಡಗಿಕೊಂಡರೆ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ನಗರ ಠಾಣೆ ಇನ್ಸ್‌ಪೆಕ್ಟರ್ ಟಿ.ಆರ್.ನಯೀಮ್ ಅಹಮದ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆದರ್ಶ ಯುವಕ/ಯುವತಿ ಸಂಘ ಮಳಲಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಸೋಲು-ಗೆಲುವಿಗಿಂತ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ. ನಾಯಕತ್ವ ಗುಣ ಬೆಳೆಯುವುದಲ್ಲದೆ ಮನಸ್ಸು ಮತ್ತು ದೇಹ ದೃಢಕಾಯವಾಗಿರುತ್ತದೆ ಎಂದು ಕ್ರೀಡೆಯ ಮಹತ್ವವನ್ನು ಕ್ರೀಡಾಪಟುಗಳಿಗೆ ಹೇಳಿದರು.
ಬ್ರಾಹ್ಮಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಾರ್ಯದರ್ಶಿ ಪಿ.ಎಂ.ರುದ್ರಯ್ಯ ಮಾತನಾಡುತ್ತ ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡುವ ಮೂಲಕ ಸದಾ ಚಟುವಟಿಕೆಯಿಂದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ. ಸೋಲು-ಗೆಲುವಿಗಿಂತ ಕ್ರೀಡಾ ಮನೋಭಾವನೆಯಿಂದ ಆಡಿ. ಯಾವುದೇ ಕಾರಣಕ್ಕೂ ಕ್ರೀಡೆಯಲ್ಲಿ ವೈಮನಸ್ಸು ಇರಬಾರದು ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಮಜರುಲ್ಲಾ, ಖಜಾಂಚಿ ಈ.ಅರುಣ್‌ಕುಮಾರ್, ಮಹಮದ್ ಮೊಹಸಿನ್ ಪಾಷ, ವೈದ್ಯಾಧಿಕಾರಿ ಸುರೇಂದ್ರ, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಆದರ್ಶ ಯುವಕ/ಯುವತಿ ಸಂಘದ ಕಾರ್ಯದರ್ಶಿ ಎನ್.ಓಂಕಾರಮ್ಮ, ತೀರ್ಪುಗಾರರು ಹಾಗೂ ನಿವೃತ್ತ ದೈಹಿಕ ಶಿಕ್ಷಕ ಇಲಾಹಿ ಭಕ್ಷಿ ವೇದಿಕೆಯಲ್ಲಿದ್ದರು