ಬೆಂಗಳೂರು: ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಆಗಿ ಮನವಿ ನೀಡಿದರು.

ಮನವಿಯಲ್ಲಿ ದೇಶದಲ್ಲಿ ಕೊರೊನಾ ಲಾಕ್‍ಡೌನ್‍ನಿಂದ ಉಂಟಾಗಿರುವ ಸಮಸ್ಯೆಯನ್ನು ಸರಿದೂಗಿಸಲು ಈಗಾಗಲೇ ರಾಜ್ಯ ಸರ್ಕಾರ ಕೆಲವು ಸಮುದಾಯಗಳಿಗೆ ಜೀವನಾಂಶವನ್ನು ಘೋಷಿಸಿದೆ. ಅದರಂತೆ ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಅರೇ ಅಲೆಮಾರಿಗಳಾಗಿ ವಲಸೆ ಜೀವನ ನಡೆಸುತ್ತಿರುವ ಬಡ ಭೋವಿ ಜನಾಂಗ ಕುಟುಂಬಗಳಿಗೆ ಜೀವನಾಂಶ ನೀಡಬೇಕು ಎಂದರು.

1) ವರ್ಷದಲ್ಲಿ ಒಂದು ತಿಂಗಳು ಸಹ ಊರಲ್ಲಿರದೇ ವಲಸೆಯಲ್ಲಿರುವ ಕಾರ್ಮಿಕ ಕುಟುಂಬಗಳು (ರಸ್ತೆ ಕೆಲಸ, ಕಾಫಿ ಎಸ್ಟೇಟ್ ಕೆಲಸ, ಕೇಬಲ್ ಕೆಲಸ, ಚೆಕ್ ಡ್ಯಾಂ, ರೈಲ್ವೆ ಕಾಮಗಾರಿ, ಕೆರೆ ಕಟ್ಟೆಗಳ ಕಾಮಗಾರಿ ಸೇರಿದಂತೆ ಇತ್ಯಾದಿ ಕೆಲಸ ನಿರ್ವಹಿಸುವ).

2) ಕಲ್ಲಿನ ಕೆಲಸ ಮಾಡುವ ಕಾರ್ಮಿಕರು (ಎಲ್ಲಾ ರೀತಿಯ ಕಲ್ಲಿನ ವಿಗ್ರಹ ಕೆತ್ತುವ ಶಿಲ್ಪಿಗಳು, ಸಿಮೆಂಟ್‍ನಲ್ಲಿ ವಿಗ್ರಹಗಳನ್ನು ತಯಾರಿಸುವ ಶಿಲ್ಪಿಗಳು, ಮಣ್ಣಿನಲ್ಲಿ ವಿಗ್ರಹಗಳನ್ನು ತಯಾರಿಸುವ ಶಿಲ್ಪಿಗಳು, ಕಲ್ಲು ಕಟ್ಟಡ, ಕ್ರಶರ್ ಕೆಲಸ, ಸೈಜ್‍ಗಲ್ಲು, ಕಲ್ಲುಕುಟ್ಟುವರು, ಚಪ್ಪಡಿ ಕಲ್ಲು ಸೇರಿದಂತೆ ಇತ್ಯಾದಿ ಕೆಲಸ ನಿರ್ವಹಿಸುವ).

3) ನೋಂದಣಿ ರಹಿತ ಹಾಗೂ ರೂ.25,000/-ಗಳಿಂಗಿತ ತಲಾದಾಯವಿರುವಂತಹ ಕುಟುಂಬಗಳು (ಗ್ರಾಮಾಲೆಕ್ಕಾಧಿಕಾರಿಗಳಿಂದ ಹಳ್ಳಿಗಳಲ್ಲಿರುವ ಬಡ ಭೋವಿ ಕೂಲಿಗಾರರ ಮಾಹಿತಿ ಪಡೆದುಕೊಂಡು, ಬಡ ಕುಟುಂಬಗಳಿಗೆ ಜೀವನಾಂಶ ಒದಗಿಸಲು ಕೋರಿಕೊಳ್ಳುತ್ತೇವೆ ಎಂದರು.