ಬಳ್ಳಾರಿ: ಕಾರ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿ ಮೂವರು ಮೃತ ಪಟ್ಟ ಘಟನೆ ಕೂಡ್ಲಿಗಿ ತಾಲೂಕಿನ ಖಾನಹೊಸಹಳ್ಳಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಮೃತರು ಮುದ್ದೇಬಿಹಾಳ ತಾಲೂಕಿನವರು ಎಂದು ತಿಳಿದುಬಂದಿದ್ದು, ಕಾರ್ ನಲ್ಲಿದ್ದ ಚಾಲಕ ದೇವರಾಜ್, ಭೀಮರಾಯ ಮತ್ತು ಅಂಜಲಿದೇವಿ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50ರ ಫ್ಲೈಓವರ್ ಮೇಲೆ ನೀರು ನಿಂತಿದ್ದು ನಿಯಂತ್ರಣ ತಪ್ಪಿದ ಕಾರ್ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿದೆ.