ಚಿತ್ರದುರ್ಗ:ಆಗಸ್ಟ್ 17 ಮತ್ತು 18ರಂದು ಧಾರವಾಡದ ಎಸ್.ಡಿ.ಎಂ ಮೆಡಿಕಲ್ ಕಾಲೇಜಿನಲ್ಲಿ ನಡೆದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಳಗಾವಿ ವಲಯಮಟ್ಟದ ಮೆಡಿಕಲ್ ಕಾಲೇಜುಗಳ ಪುರುಷರ ಬ್ಯಾಸ್ಕೆಟ್‍ಬಾಲ್ ಕ್ರೀಡಾಕೂಟದಲ್ಲಿ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.

ವಿಜೇತ ತಂಡಕ್ಕೆ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯ ನಿರ್ವಹಣಾ ನಿರ್ದೇಶಕರಾದ ಡಾ||.ಈ.ಚಿತ್ರಶೇಖರ್, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಎಸ್. ಸೋಮಶೇಖರ್, ರಿಜಿಸ್ಟ್ರಾರ್ ಎಸ್.ಹೆಚ್. ಪ್ರಕಾಶ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಸಿ.ಅಭಯ ಪ್ರಕಾಶ್ ಹಾಗೂ ಕಾಲೇಜು ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ.

ಫೋಟೋ ವಿವರ:- ಎಡದಿಂದ ಬಲಕ್ಕೆ : ಕೈಲಾಶ್ ಎನ್, ಅಕ್ಷಯ್ ಡುಡ್ಡು, ವಿಕಾಸ್. ಸಿ. ಅತೀಬ್ ಅಹಮದ್, ಡಾ|| ಪುನೀತ್ ಹಿಂದ್ಲುಮನೆ. ರಾಬಿನ್, ಗಣೇಶ್, ಮತ್ತು ಡಾ|| ಅಜಿತ್ ಆಂಟೋನಿ, (ನಾಯಕ) ಕುಳಿತಿರುವವರು ಎಡದಿಂದ : ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯ ನಿರ್ವಹಣಾ ನಿರ್ದೇಶಕರಾದ ಡಾ|| ಈ.ಚಿತ್ರಶೇಖರ್, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಎಸ್. ಸೋಮಶೇಖರ್, ರಿಜಿಸ್ಟ್ರಾರ್ ಎಸ್.ಹೆಚ್. ಪ್ರಕಾಶ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಸಿ.ಅಭಯ ಪ್ರಕಾಶ್.