ಚಿತ್ರದುರ್ಗ: ನಿನ್ನೆ ರಾತ್ರಿ ನಗರದ ವಿಪಿ ಬಡಾವಣೆಯ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿದ್ದ ಸುಮಾರು 60 ವರ್ಷಗಳಷ್ಟು ಹಳೆಯದಾದ ಬೃಹತ್ ಗಾತ್ರದ ಬೇವಿನ ಮರ ನೆಲಕ್ಕುರುಳಿದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆರು ಕಾರುಗಳು ಜಖಂ ಆಗಿವೆ.

ದೇವಸ್ಥಾನದ ಪ್ರದೇಶದ ಸುತ್ತಮುತ್ತಲಿನವರು ಆವರಣದಲ್ಲಿ ಕ್ರೇಟಾ, ಎರಡು ಸ್ವಿಫ್ಟ್, ಮಾರುತಿ ವ್ಯಾಗನಾರ್, ಸ್ಕೋಡಾ ಹಾಗೂ ಮಾರುತಿ ಆಲ್ಟೊ ಕಾರುಗಳನ್ನು ನಿಲ್ಲಿಸಿದ್ದರು. ಮರ ಬಿದ್ದ ರಭಸಕ್ಕೆ ಕಾರುಗಳು ಜಖಂ ಆಗಿವೆ.