ಬೆಂಗಳೂರು: ಲಾಕ್ ಡೌನ್ ನಿರ್ಬಂಧವನ್ನು ಕೊಂಚ ಸಡಿಲಗೊಳಿಸಿ ಬೇಕರಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲು ಸರ್ಕಾರ ತೀರ್ಮಾನಿಸಿದೆ.

ಬ್ರೆಡ್, ಬಿಸ್ಕೆಟ್, ಬನ್ ಸಿಹಿ ತಿಂಡಿಗಳನ್ನು ತೆಗೆದುಕೊಂಡು ಹೋಗಬಹುದು. ಆದರೆ ಸ್ಥಳದಲ್ಲಿ ಸೇವಿಸಲು ಅವಕಾಶವಿಲ್ಲ. ಸಾಮಾಜಿಕ ಅಂತರ ಆಯ್ದುಕೊಳ್ಳುವ ಷರತ್ತು ವಿಧಿಸಲಾಗಿದೆ.

ಬೇಕರಿ ಉತ್ಪನ್ನಗಳು ಸಿಹಿ ತಿಂಡಿಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ರೋಗಿಗಳು, ಹಿರಿಯರು, ಮಕ್ಕಳು ಬೇಕರಿ ಹಾಗೂ ಸಂಬಂಧಿತ ಉತ್ಪನ್ನ ಬಳಸುತ್ತಾರೆ. ಈ ಹಿನ್ನೆಲೆಯಲ್ಲಿ ಬೇಕರಿ ಬಿಸ್ಕತ್, ಕಾಂಡಿಮೆಂಟ್ಸ್, ಸಣ್ಣ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ಷರತ್ತು ವಿಧಿಸಲಾಗಿದೆ.