ಚಿತ್ರದುರ್ಗ: ನಗರದಲ್ಲಿ ಒಳ ಚರಂಡಿ ನಿರ್ಮಾಣದ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ೨೦೧೮ರ ಜೂನ್‌ನಲ್ಲಿ ಅಂತ್ಯಗೂಳಲಿದೆ ಎಂದು ನಗರಾಭೀವೃದ್ದಿ ಮತ್ತು ಹಜ್ ಸಚಿವರಾದ ರೋಷನ್ ಬೇಗ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧೀವೇಶನದಲ್ಲಿ ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿಯವರು, ಸಚಿವರಿಗೆ ಚಿತ್ರದುರ್ಗ ನಗರದ ಒಳಚರಂಡಿ ವ್ಯವಸ್ಥೆಯ ಕಾಮಗಾರಿಯನ್ನು ಯಾವ ವರ್ಷ ಮಾಡಲಾಗಿದ್ದೇಯೆ ಕಾಮಗಾರಿ ಪೂರ್ಣಗೊಂಡಿದ್ದೇಯೇ ಎಂಬ ಪ್ರಶ್ನೆಗೆ ಲಿಖಿತವಾಗಿ ಉತ್ತರ ನೀಡಿರುವ ಸಚಿವರು. ಚಿತ್ರದುರ್ಗ ನಗರಕ್ಕೆ ಒಳಚರಂಡಿ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ೨೦೧೧ ನವಂಬರ್ ೧೫ಕ್ಕೆ ೭೯೪೭ ಲಕ್ಷ ರೂಗಳಿಗೆ ಆಡಳಿತಾತ್ಮಕವಾದ ಅನುಮೋದನೆಯನ್ನು ನೀಡಲಾಗಿದ್ದು ೨೦೧೩ರಲ್ಲಿ ಈ ಯೋಜನೆ ಪ್ರಾರಂಭವಾಗಿದ್ದು, ಪ್ರಸ್ತುತ್ತಾ ಶೇ. ೭೮ ರಷ್ಟು ಕಾಮಗಾರಿ ಪೂರ್ಣವಾಗಿದ್ದು, ೨೦೧೮ರ ಜೂನ್ ರೊಳಗಾಗಿ ಮುಕ್ತಾಯಗೊಳಿಸಿ ಯೋಜನೆಯನ್ನು ಚಾಲನೆಗೊಳಿಸಲು ಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಕಾಮಗಾರಿಯು ಕಳೆಪೆ ಗುಣಮಟ್ಟದಿಂದ ಕೂಡಿರುವುದು ಸರ್ಕಾರದ ಗಮನಕ್ಕೆ ಬಂದಿದ್ದೆಯೇ ಹಾಗಿದ್ದಲ್ಲಿ ಯಾವ ಕ್ರಮ ಕೃಗ್ಗೊಳಲಾಗಿದೆ ಎಂದು ಶಾಸಕರು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಚಿವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿವತಿಯಿಂದ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು ಪ್ರತಿ ಹಂತ ಹಂತದಲ್ಲಿಯೂ ಸಹ ಮಂಡಳಿಯು ನೇಮಿಸಿರುವ ಮೂರನೇ ವ್ಯಕ್ತಿಯಿಂದ ಗುಣಮಟ್ಟದ ಪರೀಕ್ಷೆಗೆ ಗುಣಪಡಿಸಲಾಗಿದ್ದು, ಯೋಜನೆಯಲ್ಲಿ ಯಾವುದೇ ಕಳಪೆ ಗುಣಮಟ್ಟದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದ್ದಾರೆ.
ಒಳಚರಂಡಿ ಕಾಮಗಾರಿಯನ್ನು ಅನುಷ್ಠಾನಗೊಳಿಸುವಾಗ ನಗರದಲ್ಲಿ ರಸ್ತೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಗೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಹಾಗಿದ್ದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಲಾದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ನಗರದಲ್ಲಿ ಒಳಚರಂಡಿ ಕಾಮಗಾರಿ ಕೈಗೊಂಡ ಸಂದರ್ಭ ಹಾಳದ ರಸ್ತೆಗಳ ಪುನಶ್ವೇತನಕ್ಕಾಗಿ ಪರಿಷ್ಕೃತ ಅಂದಾಜು ಪಟ್ಟಿಯ ಸರ್ಕಾರಲ್ಲಿ ಸ್ವೀಕೃತವಾಗಿದ್ದು, ಪ್ರಸ್ತಾವನೆಯು ಸರ್ಕಾರದ ಪರೀಶೀಲನಾ ಹಂತದಲ್ಲಿದೆ ಎಂದು ಉತ್ತರಿಸಿದ್ದಾರೆ.