6ಚಿತ್ರದುರ್ಗ: ಹೊಳಲ್ಕೆರೆಯ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ   ವಾಣಿಜ್ಯ ಶಾಸ್ರ ಮತ್ತು ನಿರ್ವಹಣಾ ಶಾಸ್ರ ವಿಭಾಗದ ಮುಖ್ಯಸ್ಥರಾದ ಬಿ.ಶಿವಕುಮಾರ್ ರವರಿಗೆ  ಕುವೆಂಪು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.   ಬಿ. ಶಿವಕುಮಾರ್ ರವರು ಶಿವಮೊಗ್ಗದ   ಸಹ್ಯಾದ್ರಿ ಕಲಾ ಕಾಲೇಜಿನ ವಾಣಿಜ್ಯ ಶಾಸ್ತ್ರ  ಮತ್ತು ನಿರ್ವಹಣಾ ಶಾಸ್ತ್ರ  ಸ್ನಾತಕೋತ್ತರ ವಿಭಾಗದ ಸಹ ಪ್ರಾದ್ಯಾಪಕರಾದ ಡಾ.ಕುಂದನ್ ಬಸವರಾಜ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ ಕೆರಿಯರ್ ಡೆವಲಪ್ ಮೆಂಟ್ ಪಾಲಿಸೀಸ್ ಅಂಡ್ ಪ್ರಾಕ್ಟೀಸಸ್ ಇನ್ ಬ್ಯಾಂಕ್ಸ್ -ಎ ಸ್ಟಡಿ ವಿತ್ ಸ್ಪಷಲ್ ರೆಫರೆನ್ಸ್ ಟು ಸೆಲೆಕ್ಟೆಡ್ ಪ್ರೈವೇಟ್ ಅಂಡ್ ಪಬ್ಲಿಕ್ ಸೆಕ್ಟಾರ್ ಬ್ಯಾಂಕ್ಸ್ (ಆಯ್ಡ  ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕುಗಳಲ್ಲಿ  ವೃತ್ತಿಬೆಳವಣಿಗೆಯ  ನೀತಿಗಳು ಹಾಗು ಆಚರಣೆಗಳ ಬಗ್ಗೆ ಒಂದು ವಿಶೇಷ ಅಧ್ಯಯನ) ಎಂಬ ಸಂಶೋಧನಾ  ಮಹಾ ಪ್ರಬಂದಕ್ಕೆ ಈ ಪುರಸ್ಕಾರ ದೊರೆತಿದೆ.