ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗದಲ್ಲಿ ಜುಲೈ 16 ರಂದು 22.2 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿದೆಡೆ ಆದ ಮಳೆ ವಿವರ ಇಂತಿದೆ.

ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 2.4 ಮಿ.ಮೀ, ರಾಮಗಿರಿ 3.4, ಚಿಕ್ಕಜಾಜೂರು 1.5, ತಾಳ್ಯ 2.3, ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 1.8, ಬಾಗೂರು 06, ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ರಾಯಾಪುರ 0.2, ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 01, ದೇವರಮರಿಕುಂಟೆ 9.6, ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-01 ರಲ್ಲಿ 10.2, ಚಿತ್ರದುರ್ಗ-02 ರಲ್ಲಿ 5.6, ಹಿರೇಗುಂಟನೂರು 4, ಸಿರಿಗೆರೆಯಲ್ಲಿ 8 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.