ಬೆಳಗಾವಿ : ಲಾಕ್ ಡೌನ್ ಉಲ್ಲಂಘಿಸಿದವರಿಗೆ ಪೊಲೀಸರು ಹೊಡೆಯುವ ಬದಲು ಲೂಸ್ ಮೋಶನ್ ಮಾತ್ರೆ ನೀಡಬೇಕು ಎಂದು ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಲಾಕ್ ಡೌನ್ ಉಲ್ಲಂಘಿಸಿದವರನ್ನು ಹಿಡಿದು ಲೂಸ್ ಮೋಶನ್ ಮಾತ್ರೆ ಕೊಟ್ಟರೆ ಅವರು ಮನೆಯಲ್ಲಿ ಇರುತ್ತಾರೆ. ಮತ್ತೆ ದಿನ ನಿತ್ಯ ಕೈಗಳನ್ನು ತೊಳೆದು ಕೊಳ್ಳುತ್ತಾರೆ ಎಂದರು.

ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದರೂ, ಜನ ಲಾಕ್ ಡೌನ್ ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ ಮಹೇಶ್ ಕುಮಟಳ್ಳಿ ಲಾಕ್ ಡೌನ್ ಉಲ್ಲಂಘಿಸಿದವರಿಗೆ ಲೂಸ್ ಮೋಶನ್ ಮಾತ್ರೆ ನೀಡುವ ಹೊಸ ಪ್ಲಾನ್ ನೀಡಿದ್ದಾರೆ. ಹೇಗಿದೆ ಶಾಸಕರ ಪ್ಲಾನ್ ಅಲ್ವ.!