ಚಿತ್ರದುರ್ಗ: ಬಿಜೆಪಿ ಅಭ್ಯರ್ಥಿ ಆಗಿರುವ ಎ.ನಾರಾಯಣಸ್ವಾಮಿ ಅವರು ಮಾದಿಗ ಸಮುದಾಯದವರು. ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾದಿಗ ಸಮುದಾಯದವರಲ್ಲಾ ಎಂದು ಪ್ರಚಾರವಾಗುತ್ತಿದೆ. ಅದು ಸರಿಯಲ್ಲಾ ಅವರು ನಮ್ಮ ಸಮುದಾಯದವರು ಎಂದು ಆದಿ ಕರ್ನಾಟಕ (ಮಾದಿಗ) ಮಹಾಸಭಾ ಚಿತ್ರದುರ್ಗ ಜಿಲ್ಲಾಧ್ಯಕ್ಷ ಹೆಚ್.ಮಹಾಂತೇಶ್ ಸ್ಪಷ್ಟಪಡಿಸಿದರು.

ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು. ಕೆಲವರು ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿಯವರ ಜನಪ್ರಿಯತೆಯನ್ನು ಸಹಿಸದವರು ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಯಾವುದೇ ಕಾರಣಕ್ಕೂ ಮಾದಿಗ ಸಮುದಾಯದವರು  ಸುಳ್ಳು ಸುದ್ದಿಯನ್ನು ನಂಬಬಾರದೆಂದರು.

ಆನೇಕಲ್ ಎಸ್.ಸಿ.ಮೀಸಲು ಕ್ಷೇತ್ರದಿಂದ 4  ಬಾರಿ ಶಾಸಕರಾಗಿದ್ದವರು. ಹಾಗೂ ಯಡಿಯೂರಪ್ಪರ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಹಲವಾರು ಜನಪ್ರಿಯ ಕೆಲಸಗಳನ್ನು ಮಾಡಿದ್ದಾರೆ ಎಂದರು.

ನಾರಾಯಣಸ್ವಾಮಿ ಯವರು ಮಾದಿಗ ಸಮುದಾಯದ ಒಬ್ಬ ಧೀಮಂತ ನಾಯಕ ಹಾಗೂ ಎಲ್ಲಾ ಜಾತಿ. ವರ್ಗದ ಸಮುದಾಯವನ್ನು ಪ್ರೀತಿಸಿ, ಗೌರವಿಸುವ ಗುಣ ಇರುವವರು ಎಂದರು.

ಗೋಷ್ಠಿಯಲ್ಲಿ ಚಳ್ಳಕೆರೆ ಎಂ.ಶಿವಮೂರ್ತಿ, ಟಿ.ದೇವರಾಜ್, ವಕೀಲ ವೆಂಕಟೇಶ್, ಬಿ.ಆರ್.ಮುನಿರಾಜ್, ಸಿ.ಶೇಖರಪ್ಪ, ಭೀಮರಾಜ್, ಬಿ.ಟಿ.ವೇಮಣ್ಣ ಮುಂತಾದವರು ಉಪಸ್ಥಿತರಿದ್ದರು.