ಕೊಪ್ಪಳ: ರಾಜ್ಯದಲ್ಲಿ ಕೊರೋನಾ ಎಫೆಕ್ಟ್ ನಿಂದ 21 ದಿನಗಳ ಕಾಲ ಲಾಕ್ ಡೌನ್ ಜಾರಿಯಾಗಿದ್ದು, ಕುಡುಕರಿಗೆ ಎಣ್ಣೆ ಸಿಗದಂತಾಗಿದೆ. ಇದರಿಂದ ಕಂಗೆಟ್ಟಂತಾಗಿರುವ ಕುಡುಕರು ಕೊಪ್ಪಳದಲ್ಲಿ ಬಾರ್ ಗೆ ಕನ್ನ ಹಾಕಿ, ಸಾವಿರಾರು ಮೌಲ್ಯದ ಮದ್ಯ ಕದ್ದು ಪರಾರಿಯಾಗಿದ್ದಾರೆ.!

ಕೊಪ್ಪಳದ ಗವಿ ಮಠ ರಸ್ತೆಯ ಶ್ರೀ ಸಾಯಿ ಟ್ರೇಡರ್ಸ್ ಮಳಿಗೆಗೆ ಕನ್ನಹಾಕಲಾಗಿದೆ. ಅಂಗಡಿಯ ಹಿಂಬದಿ ಬೀಗ ಮುರಿದು ಬಾಗಿಲು ಸುಟ್ಟು ಒಳ ನುಗ್ಗಿರುವ ಕಳ್ಳರು 8 ಪಿಎಂ, ಕಿಂಗ್‌ಫಿಶರ್ ಸ್ಟೋರ್ಮ್ ಸೇರಿದಂತೆ ಸಾವಿರಾರು ರೂ. ಮೌಲ್ಯದ ಮದ್ಯ ಕದ್ದು ಪರಾರಿಯಾಗಿದ್ದಾರೆ. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ರೂಪಾಯಿ ಹಣ ಇದ್ದರೂ ಅದನ್ನು ಮಾತ್ರ ಮುಟ್ಟಿಲ್ಲ ಕಳ್ಳರು.!