ಚಿತ್ರದುರ್ಗ: ಯಾವುದೇ ಕಾರಣಕ್ಕೂ ದುರ್ಗ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಖಾಸಗಿ ಬಸ್ ರಾಷ್ಟ್ರೀಕರಣ ಮಾಡಬಾರದೆಂದು ಜಿಲ್ಲಾ ಬಸ್ ಮಾಲೀಕರ ಸಂಘದ ನಿದರ್ೆಶಕರಾದ ಗಿರೀಶ್ ಸಕರ್ಾರಕ್ಕೆ ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದಿನಿಂದಲೂ ಈ ಭಾಗದಲ್ಲಿ ಹಳ್ಳಿಗಾಡಿಗೆ ಬಸ್ ಓಡಿಸುತ್ತಿದ್ದು ಖಾಸಗಿ ಬಸ್ ಮಾಲೀಕರು. ಈಗ ಏಕಾಎಕಿ ಖಾಸಗಿ ಬಸ್ ನಿಲ್ಲಿಸಿ ಸಕರ್ಾರಿ ಬಸ್ಗಳನ್ನು ಓಡಿಸಿದರೆ ಖಾಸಗಿ ಬಸ್ನ್ನು ನಂಬಿಕೊಂಡು ಹಲವಾರು ಕಾಮರ್ಿಕರು ಜೀವನ ಸಾಗಿಸುತ್ತಿದ್ದಾರೆ. ಜೊತೆಗ ಬಸ್ ಮಾಲೀಕರು ಸಾಲ ಸೂಲ ಮಾಡಿ ಬಸ್ ನಡೆಸುತ್ತಿದ್ದೇವೆ. ಇಂತಹ ಸ್ಥಿಯಲ್ಲಿ ರಾಷ್ಟ್ರೀಕರಣ ಆದರೆ ಇವರೆಲ್ಲರ ಬದುಕಿನ ಪ್ರಶ್ನೆ ಏನು ಎಂದರು.
ನಿನ್ನೆ ಖಾಸಗಿ ಬಸ್ ಸ್ಟಾಂಡ್ಗೆ ಬಂದು ಸವರ್ೆ ಮಾಡುತ್ತೆವೆ ಎಂದು ಅಧಿಕಾರಿಗಳು ಹೇಳುತ್ತಿದ್ದಂತೆ, ಬಸ್ ಮಾಲೀಕ ಬೋಜಪ್ಪನ ಮಗ ವಿಷ ಕುಡಿದಿದ್ದಾನೆ. ಸಾವು ಬದುಕಿನ ನಡುವೆ ದಾವಣಗೆರೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾನೆ. ಅವರು ಸಾಲ ಮಾಡಿ ಲಕ್ಷ್ಮಿ ಬಸ್ ನಡೆಸುತ್ತಿದ್ದಾರ.ೆ ಅಪ್ಪ ಮಗ ಇಬ್ಬರು ಸೇರಿಕೊಂಡು ಹೇಗೋ ಬಸ್ ನಡೆಸುತ್ತಿದ್ದರು. ಯಾವಾಗ ಖಾಸಗಿ ಬಸ್ಗಳು ನಡೆಯುವುದಿಲ್ಲ ಎಂಬ ಆಘಾತ ಸುದ್ದಿ ಕೇಳಿ ಆತವಿಷ ಕುಡಿದಿದ್ದಾನೆ. ಹೀಗೆ ಮುಂದುವರದರೆ ವಿಷಕುಡಿಯವ ಸರದಿ ಜಾಸ್ತಿ ಆಗಬಹುದು ಎಂದು ಆತಂಕವನ್ನು ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸುಮಾರು 6000 ಸಾವಿರ ಖಾಸಗಿ ಬಸ್ಗಳು ಇವೆ ಅದರಲ್ಲಿ ದುರ್ಗ ಮತ್ತು ದಾವಣಗೆರೆ ಸೇರಿದಂತೆ ಸುಮಾರು 500ರಿಂದ 600 ಬಸ್ಗಳು ಹಳ್ಳಿಗಾಡಿನಲ್ಲಿ ಓಡಿಸಲಾಗುತ್ತಿದೆ. ಈಗ ಆರ್ಟಿಒ ಅವರು ಪಮರ್ಿಟ್ಗಳನ್ನು ರಿನಿವಲ್ ಮಾಡಿಕೊಡುತ್ತಿಲ್ಲ ಇದರಿಂದ ಬಸ್ ಮಾಲೀಕರಿಗೆ ತುಂಬಾ ತೊಂದರೆ ಆಗಿದೆ. ಸಕರ್ಾರ ಇತ್ತ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸ ಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಆಟೋಮೊಬೈಲ್ ಸಂಘದ ಅಜೀತ್ ಪ್ರಸಾದ್, ಬೋಜಪ್ಪ ಸೇರಿದಂತೆ ಬಸ್ ಮಾಲೀಕರ ಮುಖಂಡರುಗಳು ಉಪಸ್ಥಿತರಿದ್ದರು