ಚಿತ್ರದುರ್ಗ: ಎನ್.ಸಿ.ಇ.ಆರ್.ಟಿ ವತಿಯಿಂದ ಪ್ರಸಕ್ತ ಸಾಲಿನ ಪರಿಸರ ಅಧ್ಯಯನ ವಿಷಯದ ಕುರಿತು ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಯಡಿ   ‘SWAYAM’  (ಸ್ವಯಂ) ಪೋರ್ಟಲ್ ಮುಖಾಂತರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್‍ಲೈನ್ ತರಬೇತಿ ಆಯೋಜಿಸಲಾಗಿದೆ.

ಆಗಸ್ಟ್ 31 ರಿಂದ 16 ವಾರಗಳ ಆನ್‍ಲೈನ್ ತರಬೇತಿ ಇದ್ದು ಆಸಕ್ತ ಪ್ರಾಥಮಿಕ ಶಾಲಾ ಶಿಕ್ಷಕರು ಆಗಸ್ಟ್ 15 ರೊಳಗೆ ಸ್ವಯಂ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಡಯಟ್ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.