ಚಿತ್ರದುರ್ಗ: ಪ್ರಗತಿಪರ ದಿಕ್ಕಿನೆಡೆಗೆ ಸಾಗಲು ನಾವು ಜ್ಞಾನಾರ್ಜನೆ ಮಾಡಿಕೊಳ್ಳಬೇಕಾಗಿದೆ. ಪದವಿ ಪಡೆದ ಎಲ್ಲರೂ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಸಾಧ್ಯವಿಲ್ಲ. ಅವರವರ ಶಕ್ತಿ, ಸಾಮಥ್ರ್ಯಕ್ಕನುಸಾರವಾಗಿ ಕೆಲವರು ಮಾತ್ರ ಉದ್ಯೋಗ ಪಡೆಯಬಹುದು. ಉಳಿದವರು ತಮ್ಮ ಕೌಶಲ್ಯದ ಬಲದಿಂದ ಸ್ವಯಂ ಪ್ರೇರಿತರಾಗಿ ಉದ್ಯೋಗ ಸೃಷ್ಠಿಸಿಕೊಳ್ಳಬೇಕಾಗಿರುತ್ತದೆ ಎಂದು ಎಸ್‍ಬಿಐ,ನ ಡೆಪ್ಯೂಟಿ ಮ್ಯಾನೇಜರ್ ಶ್ರೀಮತಿ. ಶಿಲ್ಪ, ಹೇಳಿದರು.

ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಎಸ್.ಆರ್.ಎಸ್ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಆವಿಷ್ಕಾರ್-18ಗೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ,
ನೀವೇ ಉದ್ಯೋಗ, ಅವಕಾಶಗಳನ್ನು ಇತರರಿಗೆ ಕೊಡಬಹುದು ಎಂದು ತಿಳಿಸಿದರು ಮತ್ತು ಬ್ಯಾಂಕುಗಳಲ್ಲಿ ದೊರಕುವ ಕನಿಷ್ಠ, ಗರಿಷ್ಠ ಸಾಲಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಎಸ್.ಆರ್.ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ.ಪಿ. ಸುಜಾತಲಿಂಗಾರೆಡ್ಡಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಯುತ ಟಿ.ಆರ್ ಗುರುಪ್ರಸಾದ್ ಇವರು ಉಪಸ್ಥಿತರಿದ್ದು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನೇರವೇರಿಸಿಕೊಟ್ಟರು. ಸಂಸ್ಥೆಯ ಆಡಳಿತಧಿಕಾರಿ ಡಾ.ಟಿ.ಎಸ್ ರವಿ, ಉಪನ್ಯಾಸಕರಾದ ಶ್ರೀ ಮನೋಹರ.ಬಿ ಹಾಗೂ ಭೋಧಕ-ಬೋಧಕೇತರ ವರ್ಗದವರು ಹಾಗೂ ಚಿತ್ರದುರ್ಗ ಮತ್ತು ದಾವಣಗೆರೆಯ ನಾನಾ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮೊದಲ ಸ್ಥಾನ : ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯೂರು.

ದ್ವಿತೀಯ ಸ್ಥಾನ : ಎಸ್.ಆರ್.ಎಸ್ ಪ್ರಥಮ ದರ್ಜೆ ಕಾಲೇಜು, ಚಿತ್ರದುರ್ಗ.

ತೃತೀಯ ಸ್ಥಾನ : ಸರ್ಕಾರಿ ಪ್ರಥಮ ದರ್ಜೆ ಕಲಾ ಕಾಲೇಜು, ಚಿತ್ರದುರ್ಗ.