ಉಡುಪಿ: ಬಾರ್ಕೂರಿನ ಭಾರ್ಗವ ಬೀಡು, ಶ್ರೀ ಶ್ರೀ ಶ್ರೀ ಬಾರ್ಕೂರು ಮಹಾಸಂಸ್ಥಾನದವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮೂವರಿಗೆ ಈ ಬಾರಿಯ ಭಾರ್ಗವ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಕೃಷಿಕ್ಷೇತ್ರದಿಂದ ನೆಲಮಂಗಲದ ಸಾವಯವ ಕೃಷಿಕರಾದ ನೆಡೂರು ಎನ್.ರವೀಂದ್ರನಾಥ ಶೆಟ್ಟಿ, ಆಡಳಿತ ಸೇವೆ ಕ್ಷೇತ್ರದಿಂದ ಜಿಕ್ಕಮಗಳೂರಿನ ಪೋಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹಾಗೂ ಸಮಾಜಸೇವೆ ಹಾಗೂ ಶಿಕ್ಷಣ ಕ್ಷೇತ್ರದಿಂದ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ದೀನಬಂಧು ಸೇವಾಟ್ರಸ್ಟ್‌ನ ಅಧ್ಯಕ್ಷರಾದ ಎಂ.ರಮೇಶ್ ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಇದೇ ತಿಂಗಳು ೧೪ರಂದು ಬ್ರಹ್ಮಾವರದ ಬಂಟರ ಭವನದಲ್ಲಿ ಶ್ರೀ ಶ್ರೀ ಶ್ರೀ ವಿದ್ಯಾವಾಚಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದಂಗಳವರ ಜನ್ಮದಿನದ ಅಂಗವಾಗಿ ನೆರವೇರಲಿರುವ ಗುರುವಂದನೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ೧೦೮ ಶಿಕ್ಷಕರುಗಳಿಗೂ ಕೂಡ ಸನ್ಮಾನಿಸಲಾಗುತ್ತಿದೆ.

ಪೂಜ್ಯ ಗುರೂಜಿಯವರ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥಾನದ ಉಪಾಧ್ಯಕ್ಷರಾದ ಬಿ.ಅಪ್ಪಣ್ಣಹೆಗ್ಡೆ ವಹಿಸಲ್ಲಿದ್ದು ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಉಪಸ್ಥಿತರಿರುತ್ತಾರೆ.