ಚಿತ್ರದುರ್ಗ: ಗೃಹರಕ್ಷಕರಿಗೆ ಸರ್ಕಾರಿ ಸೌಲಭ್ಯ, ವೇತನ ಹೆಚ್ಚಳ ಹಾಗೂ ಪೋಲೀಸರಿಗೆ ನೀಡುವಂತೆ ಎಲ್ಲಾ ಸೌಲಭ್ಯಗಳು ಮತ್ತು ಹುದ್ದೆ ಖಾಯಂ ಸೇರಿದಂತೆ ಹಲವು ಬೇಡಿಕೆಗಳ ಮನವಿಯನ್ನು ಜಿಲ್ಲಾ ಗೃಹರಕ್ಷಕದಳದವರು ಇಲ್ಲಿಯ ಹೋಂ ಗಾರ್ಡ್ಸ್ ಕಛೇರಿಯಲ್ಲಿ ಜಿಲ್ಲಾ ಕಮಾಂಡೆಂಟ್ ಶ್ರೀಮತಿ ಸಿ.ಕೆ.ಸಂಧ್ಯಾರವರಿಗೆ ಮನವಿ ಸಲ್ಲಿಸಿದರು.

ಬೇಡಿಕೆಗಳ ಬಗ್ಗೆ ಐ.ಜಿ. ಎಂ.ಎನ್.ರೆಡ್ಡಿಯವರು ಹಾಗೂ ಡಿ.ಐ.ಜಿ. ಡಿ.ರೂಪಾರವರೊಂದಿಗೆ ಚರ್ಚಿಸಿ ಹಲವು ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುವುದಾಗಿ ಸಿ.ಕೆ.ಸಂಧ್ಯಾರವರು ಭರವಸೆ ನೀಡಿದರು.