ಮೀರತ್: ಪೊಲೀಸರ ನಿಷ್ಕ್ರಿಯತೆಗೆ ಬೇಸತ್ತು ಅತ್ಯಾಚಾರ ಸಂತ್ರಸ್ತೆಯೊಬ್ಬರು ತನ್ನ ಜೀವವನ್ನೇ ಕೊನೆಗಾಣಿಸಿಕೊಂಡಿದ್ದಾಳೆ. ಈ ಘಟನೆಯು ಮೀರತ್‌ನಲ್ಲಿ ನಡೆದಿದೆ.

ವಿಚ್ಛೇದಿತೆಯಾಗಿದ್ದ 27 ವರ್ಷದ ಸಂತ್ರಸ್ತೆ ಮೇಲೆ ಕೆಲವು ದಿನಗಳ ಹಿಂದೆ ತನ್ನ ಮೇಲೆ ಅತ್ಯಾಚಾರವಾಗಿದೆಯೆಂದು ದೂರನ್ನು ನೀಡಿದ್ದಳು. ಆದರೆ ಪೊಲೀಸರು ಈ ಬಗ್ಗೆ ಸರಿಯಾಗಿ ಕ್ರಮ ಕೈಗೊಳ್ಳಲಿಲ್ಲವೆಂದು ಆಕೆ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದಳು. ಇದೇ ಹತಾಶೆಯಲ್ಲಿ ಸ್ವಯಂ ಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಆಕೆಯ ಡೆತ್ ನೋಟ್ ಸಿಕ್ಕಿಲ್ಲವೆಂದು ಪೊಲೀಸರು ಮಾಹಿತಿ ನೀಡಿದ್ದಾರೆ