ಬೆಂಗಳೂರು:  ಪಬ್ಲಿಕ್ ಟಿವಿಯ ಎಚ್.ಆರ್.ರಂಗನಾಥ್ ಮೇಲೆ ರವಿಬೆಳಗೆರೆ ಫೇಸ್ ಬುಕ್ ನಲ್ಲಿ ಹೀಗೆ ಬರೆದಿದ್ದಾರೆ. ಟಿಆರ್ ಪಿ ದೋಚುವ ಹಂಬಲದಲ್ಲಿ ನನ್ನ ಪತ್ನಿ, ಮನೆ ಎಲ್ಲ ತೋರಿಸಿದರು. ಸರಿ, ಆದರೆ ನನ್ನ ಹತ್ತು ವರ್ಷದ ಮಗ ಏನು ಮಾಡಿದ್ದ? ಅಪ್ರಾಪ್ತ ವಯಸ್ಸಿನ ಮಗುವಿನ ಚಿತ್ರ ತೋರಿಸೋದು ಅಪರಾಧ. ಈಗ ನಾನು ರಂಗನ ಮೇಲೆ ತುಂಬಾ ದೊಡ್ಡ ಮೊತ್ತಕ್ಕೆ ಕೇಸ್ ಹಾಕುತ್ತಿದ್ದೇನೆ. ಯಾಕೆ ಬಿಡಲಿ, ಹೇಳಿ. ಈ ವಿಷಯದಲ್ಲಿ ಕೋರ್ಟ್ ತುಂಬಾ ಕಠಿಣವಾಗಿ ನಡೆದುಕೊಳ್ಳುತ್ತದೆ. ರಂಗನಿಗೊಂದು ಗತಿ ಕಾಣಿಸುತ್ತೇನೆ.

ಹೀಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಮತ್ತು ವಕೀಲರನ್ನು ಭೇಟಿ ಮಾಡಿ ಕೇಸ್ ಹಾಕಲು ರೆಡಿ ಆಗಿದ್ದೇನೆ ಎಂದು ಹೇಳಿದ್ದಾರೆ.