ಚಿತ್ರದುರ್ಗ:: ತುಮಕೂರು ಖಾಸಗಿ ವಾಹಿನಿ ವರದಿಗಾರ ವಾಗೀಶ್ ಮೇಲಿನ ಹಲ್ಲೆಯನ್ನು ಖಂಡಿಸಿ  ಚಿತ್ರದುರ್ಗ ಜಿಲ್ಲಾ ಪತ್ರಕರ್ತರ ಸಂಘದಿಂದ ಕಪ್ಪು ಪಟ್ಟಿ ಧರಿಸಿ  ಪ್ರತಿಭಟನೆ ನಡೆಸಲಾಯಿತು.

ಪತ್ರಕರ್ತರ ಮೇಲಿನ ನಿರಂತರ ಹಲ್ಲೆ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ಪ್ರತಿಭಟನೆಕಾರರು, ಹೀಗೆ ನಿರಂತರವಾಗಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದೇ ಆದರೆ ಸರಕಾರದ ಕಾರ್ಯಕ್ರಮಗಳ ಬಗ್ಗೆ ಪೆನ್ ಡೌನ್ ಪತ್ರಿಭಟನೆ ಮುಂದಾಗ ಬೇಕಾಗುತ್ತೆ ಎಂದು  ಪ್ರತಕರ್ತ ಪುಟ್ಟಸ್ವಾಮಿ ಹೇಳಿದರು.

ಪತ್ರಕರ್ತರ ರಕ್ಷಣೆಗೆ ಅಗತ್ಯ ಕಾನೂನು ಜಾರಿಗೆ ತರಲು ಆಗ್ರಹಿಸಿದ ಪತ್ರಕರ್ತರು,  ವರದಿಗಾರನ ಮೇಲೆ ದೌರ್ಜನ್ಯವೆಸಗಿರುವ ಬಿಜೆಪಿ ಮುಖಂಡರ ಬಂಧನಕ್ಕೆ ಒತ್ತಾಯಿಸಿ ಮನವಿಯನ್ನು ನೀಡಲಾಯಿತು.

ಪ್ರತಿಭಟನೆಯಲ್ಲಿ ಪತ್ರಕರ್ತರುಗಳಾದ  ಮೇನಾ ಅಹೋಬಳಪತಿ, ಚಿಕ್ಕಪ್ಪನಹಳ್ಳಿ ಷಣ್ಮುಖ, ಚಳ್ಳಕೆರೆ ಬಸವರಾಜ,, ಗಾಣದಾಳು ಶ್ರೀಕಂಠ,  ಸುರೇಶ್  ಪಟ್ಟಣ್, ಸುರೇಶ್ ಸೇರಿದಂತೆ ಪತ್ರಕರ್ತರು ಭಾಗವಹಿಸಿದ್ದರು.