ಬೆಂಗಳೂರು : ದೇಶಾದ್ಯಂತ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಪಡಿತರ ಚೀಟಿದಾರರಿಗೆ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಒಟ್ಟಿಗೆ ನೀಡಲಾಗುತ್ತಿದೆ.

ಪಡಿತರ ಕಾರ್ಡ್ ದಾರರು ಪಡಿತರ ಪಡೆಯಲು ಒಟಿಪಿ ಪಡೆದುಕೊಳ್ಳಲು ಆಹಾರ ಇಲಾಖೆ ತೀರ್ಮಾನಿಸಿತ್ತು. ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಒಟಿಪಿ ಪಡೆಯಲು ತಾಂತ್ರಿಕ ತೊಂದರೆಯಾದ ಕಾರಣ ಒಟಿಪಿ ಇಲ್ಲದೇ ಗ್ರಾಹಕರ ಸಹಿ ಪಡೆದು ಪಡಿತರ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತೀರ್ಮಾನಿಸಿದೆ.

ಈ ಕುರಿತು ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಆದೇಶ ಹೊರಡಿಸಿದ್ದು, ಪಡಿತರ ಕಾರ್ಡ್ ದಾರರು ಒಟಿಪಿ ಇಲ್ಲದೇ ಸಹಿ ಮಾಡಿ ರೇಷನ್ ಪಡೆದುಕೊಳ್ಳಬಹುದು.