ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಹಸಿರು ವಲಯದ 14 ಜಿಲ್ಲೆಗಳಲ್ಲಿ ಮೇ 7ರಿಂದ ಚಾಲನಾ ಪರವಾನಗಿ (ಡಿಎಲ್) ಮತ್ತು ಕಲಿಕಾ ಪರವಾನಗಿ (ಎಲ್ಎಲ್) ಪರೀಕ್ಷೆಗಳು ನಡೆಯಲಿದೆ.

ಪ್ರತಿದಿನ ಶೇಕಡ 50 ಮಂದಿಗೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಪರೀಕ್ಷೆ ನಡೆಯುವ ದಿನಾಂಕ ಹಾಗೂ ವಿವರಗಳನ್ನು ಆಭ್ಯರ್ಥಿಗಳ ಮೊಬೈಲ್‍ಗೆ ರವಾನಿಸಲಾಗಿದೆ. ಈಗಾಗಲೇ ಆನ್‍ಲೈನ್‌ನಲ್ಲಿ ನೋಂದಾಯಿಸಿ, ಪರೀಕ್ಷೆಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ನಿಗದಿತ ದಿನಾಂಕದಂದು ಪರೀಕ್ಷೆಗಳು ನಡೆಯಲಿವೆ.