ಚಿತ್ರದುರ್ಗ: ಕೋವಿಡ್-19 ಸಾಂಕ್ರಾಮಿಕ ರೋಗ  ತಡೆಗಾಗಿ ಲಾಕ್‍ಡೌನ್ ಘೋಷಣೆ ಮಾಡಿರುವುದರಿಂದ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿರುತ್ತದೆ. ಆದರೆ ವಲಸೆ ಕಾರ್ಮಿಕರು, ನಿರ್ಗತಿಕರು ಮತ್ತು ಅಲೆಮಾರಿ ಇನ್ನಿತರೆ ವರ್ಗದವರಿಗೆ ದಿನನಿತ್ಯದ ಜೀವನ ನಿರ್ವಹಣೆಗಾಗಿ ಜಿಲ್ಲಾಡಳಿತದಿಂದ ವಿವಿಧ ನೋಡಲ್ ತಂಡಗಳನ್ನು ಮಾಡಿ, ಅವರ ಮೂಲಕ ಅವಶ್ಯಕ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.

ಸ್ವಯಂ ಸೇವಕ ಸಂಘಗಳು, ದಾನಿಗಳು ಪ್ರತ್ಯೇಕವಾಗಿ ಆಹಾರ ಸಾಮಾಗ್ರಿ, ಸಿದ್ದ ಆಹಾರ ಮುಂತಾದ ನಿತ್ಯೋಪಯೋಗಿ ವಸ್ತುಗಳನ್ನು ವಿತರಣೆ ಮಾಡಲು ಇಚ್ಚಿಸಿದಲ್ಲಿ ಸಾರ್ವಜನಿಕರಿಗೆ ನೇರವಾಗಿ ವಿತರಣೆ ಮಾಡದೇ ಕಡ್ಡಾಯವಾಗಿ ಜಿಲ್ಲಾಡಳಿತದ ಮೂಲಕ ನೇಮಿಸಲಾಗಿರುವ ತಂಡಗಳಿಗೆ ತಲುಪಿಸಬೇಕು. ಇದರಿಂದ ಅನಗತ್ಯವಾಗಿ ಜನರು ಗುಂಪು ಸೇರುವುದು, ಮನೆಯಿಂದ ಹೊರಬರುವುದನ್ನು ತಡೆಯಬಹುದಾಗಿದ್ದು, ಅಗತ್ಯವಿರುವವರಿಗೆ ಸೇವೆಯನ್ನು ಒದಗಿಸಿದಂತಾಗುತ್ತದೆ.

ನೋಡಲ್ ಅಧಿಕಾರಿಗಳ ವಿವರ ಇಂತಿದೆ. ಚಿತ್ರದುರ್ಗ ನಗರ ಮತ್ತು ತಾಲ್ಲೂಕು ವ್ಯಾಪ್ತಿಯವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕೆ.ಪಿ.ಮಧುಸೂಧನ್-9448233477, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರರಾವ್-9620089272, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅವಿನ್ ರಾಮಚಂದ್ರ-9886907455 ಕ್ಕೆ ಸಂಪರ್ಕಿಸಬಹುದು.

ಜಿಲ್ಲೆಯ ಇತರೆ ತಾಲ್ಲೂಕಿನವರು ಸಂಬಂಧಪಟ್ಟ ತಹಶೀಲ್ದಾರ್‍ರನ್ನು ಸಂಪರ್ಕಿಸಬಹುದು. ಚಳ್ಳಕೆರೆ ತಹಶೀಲ್ದಾರ್-9606558647, ಹಿರಿಯೂರು ತಹಶೀಲ್ದಾರ್-9008305426, ಮೊಳಕಾಲ್ಮುರು ತಹಶೀಲ್ದಾರ್-9448556100, ಹೊಸದುರ್ಗ ತಹಶೀಲ್ದಾರ್-9148824641, ತಹಶೀಲ್ದಾರ್ ಹೊಳಲ್ಕೆರೆ-8660519889 ಕ್ಕೆ ಸಂಪರ್ಕಿಸಿ ಸೇವೆ ಪಡೆಯಬಹುದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ