ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ತೋಟಗಾರಿಕೆ ರೈತರಿಗೆ 2018-19 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆಗಳಿಗೆ “ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ“ ಯನ್ನು ಚಿತ್ರದುರ್ಗ ತಾಲ್ಲೂಕಿಗೆ ಮಾವು, ದಾಳಿಂಬೆ, ಅಡಿಕೆ ಬೆಳೆಗಳಿಗೆ ನಿಗಧಿಪಡಿಸಿದೆ. ಈ ಬೆಳೆಗಳಿಗೆ ವಿಮೆ ನೊಂದಾಯಿಸಿಕೊಳ್ಳಲು ಜೂನ್ 30 ಕೊನೆಯ ದಿನವಾಗಿದೆ ಎಂದು ಚಿತ್ರದುರ್ಗ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ಚಿತ್ರದುರ್ಗ ತಾಲ್ಲೂಕಿನ ಕಸಬಾ ಈರುಳ್ಳಿ ನೀರಾವರಿ, ಮಳೆಯಾಶ್ರಿತ, ಹಿರೇಗುಂಟನೂರು ಈರುಳ್ಳಿ ನೀರಾವರಿ, ಮಳೆಯಾಶ್ರಿತ, ಭರಮಸಾಗರ ಈರುಳ್ಳಿ, ಟೊಮೆಟೋ, ತುರುವನೂರು ಈರುಳ್ಳಿ ನೀರಾವರಿ, ಮಳೆಯಾಶ್ರಿತ ತೋಟಗಾರಿಕೆ ಬೆಳೆಗಳಿಗೆ ವಿಮೆ ನೊಂದಣಿಗೆ ಜುಲೈ 16 ಕೊನೆಯ ದಿನವಾಗಿದೆ. ಈರುಳ್ಳಿ ಮಳೆಯಾಶ್ರಿತ ಮತ್ತು ಟೊಮೆಟೋ ಬೆಳೆಗೆ ಜುಲೈ 31 ವಿಮೆ ನೊಂದಣಿಗೆ ಕೊನೆ ದಿನವಾಗಿದೆ.
ಈರುಳ್ಳಿ ನೀರಾವರಿ ಹಾಗೂ ಮಳೆಯಾಶ್ರಿತ ಬೆಳೆಗೆ ರೈತರ ವಿಮಾಕಂತು ರೂ.3750/- ಪ್ರತಿ ಹೆಕ್ಟೇರಿಗೆ, ಹಾಗೂ ಟೊಮೆಟೋ ಬೆಳೆಗೆ ರೂ.5900/- ಪ್ರತಿ ಹೆಕ್ಟೇರಿಗೆ. ಮಾವು ಬೆಳೆಗೆ ರೈತರ ವಿಮಾಕಂತು ರೂ.4000/-, ಅಡಿಕೆ ಬೆಳೆಗೆ ರೈತರ ವಿಮಾಕಂತು ರೂ.6400, ದಾಳಿಂಬೆ ಬೆಳೆಗೆ ರೂ.6350/- ಪ್ರತಿ ಹೆಕ್ಟೇರಿಗೆ ಆಗಿರುತ್ತದೆ.