ಚಿತ್ರದುರ್ಗ:ಚಿತ್ರದುರ್ಗ ಜಿಲ್ಲೆಯಲ್ಲಿ 2018-19 ನೇ ಸಾಲಿನ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾಯೋಜನೆ ಜಾರಿಗೊಳಿಸಲಾಗಿದ್ದು, ವಿಮೆ ನೊಂದಣಿಗೆ ನ. 30 ಕೊನೆಯ ದಿನವಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿಕವಿತಾಅವರು ತಿಳಿಸಿದ್ದಾರೆ.

ತಾಲ್ಲೂಕು, ಹೋಬಳಿ ಮತು ್ತಅಧಿಸೂಚಿತ ಬೆಳೆ ವಿವರ ಇಂತಿದೆ. ಚಿತ್ರದುರ್ಗ ತಾಲ್ಲೂಕಿನ ಕಸಬಾ ಹೋಬಳಿ ಮತ್ತು ತುರವನುರು ಹೋಬಳಿ. ಚಳ್ಳಕೆರೆ ತಾಲ್ಲೂಕು ಕಸಬಾ ಮತ್ತು ತಳಕು ಹೋಬಳಿ.ಹಿರಿಯೂರು ತಾಲ್ಲೂಕು ಐಮಂಗಲ ಮತ್ತು ಜೆ.ಜಿ. ಹಳ್ಳಿ ಹೋಬಳಿ ಪ್ರದೇಶಗಳಿಗೆ ಈರುಳ್ಳಿ (ನೀರಾವರಿ) ಬೆಳೆಯನ್ನು ಅಧಿಸೂಚಿಸಲಾಗಿದೆ. ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತರೂ.75000 ಆಗಿದ್ದು, ರೈತರು ಪಾವತಿಸಬೇಕಾದ ವಿಮಾಕಂತು ರೂ. 3750. ಜಿಲ್ಲೆಗೆ ಯುಐಐಸಿ ವಿಮಾಕಂಪನಿಯನ್ನು ನಿಗದಿಪಡಿಸಲಾಗಿದ್ದು, ವಿಮೆ ನೊಂದಣಿಗೆ ನ. 30 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆತೋಟಗಾರಿಕೆಇಲಾಖೆಯ ಹಿರಿಯ / ಸಹಾಯಕತೋಟಗಾರಿಕೆ ನಿರ್ದೇಶಕರು, ರೈತ ಸಂಪರ್ಕಕೇಂದ್ರದ ಸಹಾಯಕತೋಟಗಾರಿಕೆ ಅಧಿಕಾರಿಗಳು ಅಥವಾ ಸಮೀಪದ ಬ್ಯಾಂಕ್‍ಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದುಎಂದುತೋಟಗಾರಿಕೆ ಇಲಾಖೆ ಉಪನಿರ್ದೇಶಕಿಕವಿತಾಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.