ಬೆಂಗಳೂರು: ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿ ಮಾಡದೇ ತಲೆಮರೆಸಿಕೊಂಡಿದ್ದ ನಟ, ನಿರ್ಮಾಪಕ ಎಸ್.ನಾರಾಯಣ್ ಅವರನ್ನು ಬೆಂಗಳೂರು ಬಸವೇಶ್ವರ ನಗರದ ಪೊಲೀಸರು ಬಂಧಿಸಿದ್ದಾರೆ. 

ಎಸ್.ನಾರಾಯಣ್ 2013ರಲ್ಲಿ ಐಡಿಬಿಐ ಬ್ಯಾಂಕಿನಿಂದ 3.10 ಕೋಟಿ ರೂ.ಸಾಲ ಪಡೆದಿದ್ದರು. ಸಾಲ ಮರುಪಾವತಿಸದಿದ್ದ ಕಾರಣ ಬ್ಯಾಂಕ್ ನವರು ವಂಚನೆ ಪ್ರಕರಣ ದಾಖಲಿಸಿದ್ದರು. 

ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ 2 ಬಾರಿ ವಾರೆಂಟ್ ಹೊರಡಿಸಿದ್ದರು ಅವರು ಹಾಜರಾಗಿರಲಿಲ್ಲ. ಹೀಗಾಗಿ ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.