ಚಿತ್ರದುರ್ಗ: ಇದೇ ಮೇ ತಿಂಗಳ ವಿದ್ಯುತ್ ಬಿಲ್‍ಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣ ಅಗತ್ಯವಿದ್ದಲ್ಲಿ ಬೆಸ್ಕಾಂನ ಉಪವಿಭಾಗ ಕಚೇರಿಗಳ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಬೆಸ್ಕಾಂ ವಲಯದ ಮುಖ್ಯ ಇಂಜಿನಿಯರ್ ಅವರು ತಿಳಿಸಿದ್ದಾರೆ.

ಕೋವಿಡ್-19 ವೈರಸ್ ಹರಡುವುದನ್ನು ತಡಗಟ್ಟುವ ನಿಟ್ಟಿನಲ್ಲಿ ಕಳೆದ ಏಪ್ರಿಲ್‍ನಲ್ಲಿ ಗ್ರಾಹಕರಿಗೆ ಮೀಟರ್‍ನಲ್ಲಿರುವ ವಾಸ್ತವಿಕ ರೀಡಿಂಗ್‍ನ ಪ್ರಕಾರ ಬಿಲ್ ನೀಡಿರುವುದಿಲ್ಲ. ಬದಲಾಗಿ ಹಿಂದಿನ ತಿಂಗಳುಗಳ ಬಳಕೆಯ ಸರಾಸರಿ ಆಧಾರದ ಮೇಲೆ ವಿದ್ಯುತ್ ಬಿಲ್ ಜನಿತಗೊಳಿಸಲಾಗಿರುತ್ತದೆ.

ಇದೇ ಮೇ ತಿಂಗಳಿನಲ್ಲಿ ಸೀಲ್‍ಡೌನ್ ಏರಿಯಾಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಸ್ಥಾವರಗಳಿಗೆ ವಾಸ್ತವಿಕವಾಗಿ ಬಳಸಿದ ಯೂನಿಟ್‍ನ ಆಧಾರದಲ್ಲಿ ವಿದ್ಯುತ್ ಬಿಲ್ ವಿತರಣೆ ಮಾಡಲಾಗುತ್ತಿದೆ. ಮೇ ನಲ್ಲಿ ವಿತರಿಸಲಾದ ವಿದ್ಯುತ್ ಬಿಲ್‍ಗಳ ಬಗ್ಗೆ ಯಾವುದೇ ಸ್ಪಷ್ಟೀಕರಣದ ಅಗತ್ಯವಿದ್ದಲ್ಲಿ ಬೆಸ್ಕಾಂ ಉಪವಿಭಾಗ ಕಚೇರಿಗಳ ದೂರವಾಣಿ ಸಂಖ್ಯೆಗಳಿಗೆ ವ್ಯಾಟ್ಸಪ್, ಎಸ್.ಎಂ.ಎಸ್, ಅಥವಾ ದೂರವಾಣಿ ಮುಖಾಂತರ ಸಂಪರ್ಕಿಸಬಹುದು.

ಸಂಪರ್ಕಿಸಬೇಕಾದ ಬೆಸ್ಕಾಂ ಅಧಿಕಾರಿಗಳ ದೂರವಾಣಿ ಸಂಖ್ಯೆಗಳ ವಿವರ ಕ್ರಮವಾಗಿ ಇಂತಿದೆ.  ಉಪವಿಭಾಗಾಧಿಕಾರಿ ಕಚೇರಿ ಹಾಗೂ ಸಹಾಯಕ ಲೆಕ್ಕಾಧಿಕಾರಿಗಳ ದೂರವಾಣಿ ಸಂಖ್ಯೆ : ಚಿತ್ರದುರ್ಗ ನಗರ ಉಪವಿಭಾಗ-9448279037, 9449843554. ಚಿತ್ರದುರ್ಗ ಗ್ರಾಮೀಣ ಉಪವಿಭಾಗ-9448279038, 9742184755. ಹೊಸದುರ್ಗ-9448279039, 9449843557. ಹೊಳಲ್ಕೆರೆ-9448279040, 9449843558. ಶ್ರೀರಾಂಪುರ-9591858523, 9449861471. ಹಿರಿಯೂರು-9448279041, 9449843566. ಚಳ್ಳಕೆರೆ-9448279042, 9449843565. ಮೊಳಕಾಲ್ಮುರು-9448279043, 944843577. ತಳಕು-7019456127, 9449743600 ಕ್ಕೆ ಸಂಪರ್ಕಿಸಬಹುದು ಎಂದರು ಬೆಸ್ಕಾಂ ಮುಖ್ಯ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.