ಚಿತ್ರದುರ್ಗ  ಚಿತ್ರದುರ್ಗ ಜಿಲ್ಲಾ ವಕ್ಫ್ ಸಲಹಾ ಸಮಿತಿ ತುರ್ತು ಸಭೆಯು ಶನಿವಾರ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಕೆ.ಅನ್ವರ್ ಭಾಷಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕೊರೊನಾ ಸೋಂಕು ಹರಡುವ ಭೀತಿಯಿಂದ ಸರ್ಕಾರದಿಂದ ಬಂದು ಸುತ್ತೊಲೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಅದರಂತೆ ಜಿಲ್ಲೆಯ ಎಲ್ಲಾ ಮಸೀದಿಯ ಮುತುವಲ್ಲಿಯವರುಯ ಮಸೀದಿಯಲ್ಲಿ ಮಸೀದಿಯ ಸಿಬ್ಬಂದಿ ಸೇರಿ 4 ಜನಕ್ಕಿಂತ ಹೆಚ್ಚು ಜನ ನಮಾಜ್ ಅನ್ನು ಮಾಡದಂತೆ ನೋಡಿಕೊಳ್ಳಬೇಕು.

ಅಜಾನ್ ಆದ ತಕ್ಷಣ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ನಮಾಜ್ ಮಾಡಿಕೊಳ್ಳಲು ಮತ್ತು ಕೊರೊನಾ ಸೋಂಕಿನ ಜಾಗೃತಿಯ ಬಗ್ಗೆ ಧ್ವನಿವರ್ಧಕದಲ್ಲಿ ಪ್ರಚಾರ ಪಡಿಸುವಂತೆ ಸಭೆಯಲ್ಲಿ ತಿಳಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷರಾದ ಮೊಹಮ್ಮದ್ ಸೈಫುಲ್ಲಾ, ಸಾಧಿಕ್ ಬಾಷಾ, ಸದಸ್ಯರಾದ ಮೊಹಮ್ಮದ್ ಅಬ್ದುಲ್ಲಾ ಪಟೇಲ್, ಅತೀಕ್, ಉರ್ ರೆಹಮಾನ್, ಎಸ್.ಎ.ರಹೀಮ್, ಸಿರಾಜುದ್ದಿನ್, ಮೊಹಮ್ಮದ್ ರಶೀದ್ ಉಪಸ್ಥಿತರಿದ್ದರು.

(ಸಾಂದರ್ಭಿಕ ಚಿತ್ರ)