ಚಿತ್ರದುರ್ಗ: ಕೇಬಲ್ ನೆಟ್‍ವರ್ಕ್ ಕಾಯಿದೆಯಡಿ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯನ್ನು ಅಕ್ಟೋಬರ್ 16 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಹಾಗೂ ಸಮಿತಿ ಅಧ್ಯಕ್ಷರಾದ ವಿ.ವಿ.ಜ್ಯೋತ್ಸ್ನಾರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿದೆ.

ಸಮಿತಿಯು ಜಿಲ್ಲೆಯಲ್ಲಿನ ಕೇಬಲ್ ನೆಟ್‍ವರ್ಕ್ ಕಾಯಿದೆಯಡಿ ಕೇಬಲ್ ಆಪರೇಟರ್‍ಗಳು ನೀಡುತ್ತಿರುವ ಸೇವೆಗಳಿಗೆ ಸಂಬಂಧಿಸಿದಂತೆ ಮತ್ತು ಸ್ಥಳೀಯ ಮಟ್ಟದಲ್ಲಿ ಕೇಬಲ್ ಆಪರೇಟರ್‍ಗಳು ಅನಪೇಕ್ಷಿತ ವಿಷಯಗಳನ್ನು ಪ್ರಸಾರ ಮಾಡುತ್ತಿರುವ ಬಗ್ಗೆ ವೀಕ್ಷಕರ ದೂರುಗಳನ್ನು ಸ್ವೀಕರಿಸಿ ಕಾಯಿದೆಯನ್ವಯ ಜಿಲ್ಲಾ ಮಟ್ಟದ ಸಮಿತಿ ಕ್ರಮ ಕೈಗೊಳ್ಳಲಿದೆ.

ಗ್ರಾಹಕರು ಕೇಬಲ್ ನೆಟ್‍ವರ್ಕ್ ಸೇವೆಗಳಿಗೆ ಸಂಬಂಧಿಸಿದಂತೆ ತಮ್ಮ ದೂರುಗಳಿದ್ದಲ್ಲಿ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ಇವರ ಕಚೇರಿಗೆ ನೀಡಬಹುದಾಗಿದೆ ಎಂದು ವಾರ್ತಾಧಿಕಾರಿ ಧನಂಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.