ಚಿತ್ರದುರ್ಗ: ಗಾಳಿ, ಮಳೆಯಿಂದ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದು ಅಪಾಯವಾಗುವ ಸಾಧ್ಯತೆಗಳಿರುವುದರಿಂದ, ಸಾರ್ವಜನಿಕರು ಇಂತಹ ಸಂದರ್ಭದಲ್ಲಿ ಬೆಸ್ಕಾಂನ ಶಾಖಾಧಿಕಾರಿಗಳ ಸಹಾಯವಾಣಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಚಿತ್ರದುರ್ಗ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜೆ. ರಮೇಶ್ ಮನವಿ ಮಾಡಿದ್ದಾರೆ.

ಬೆಸ್ಕಾಂ ಚಿತ್ರದುರ್ಗ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ತುರುವನೂರು, ಭರಮಸಾಗರ, ಸಿರಿಗೆರೆ, ಭೀಮಸಮುದ್ರ, ಹಿರೇಗುಂಟನೂರು, ಪಂಡರಹಳ್ಳಿ, ಶಾಖೆಗಳಲ್ಲಿ ವಿವಿಧ  ಸಾಮಥ್ರ್ಯದ ಪರಿವರ್ತಕಗಳಿದ್ದು, ಗಾಳಿ ಮಳೆಯಿಂದ ತಂತಿಗಳು ತುಂಡಾಗಿ ಅಪಾಯವಾಗುವ ಸಂಭವ ಹೆಚ್ಚಾಗಿದ್ದು, ಸಾರ್ವಜನಿಕರು ಇಂತಹ ಸಂದರ್ಭಗಳಲ್ಲಿ ಶಾಖಾಧಿಕಾರಿಗಳ ಸಹಾಯವಾಣಿಗೆ ಸಂಪರ್ಕಿಸಿ ತಿಳಿಸಬೇಕು.

ಸಾರ್ವಜನಿಕರಿಗೆ ಎಚ್ಚರಿಕೆ: ವಿದ್ಯುತ್ ಮಾರ್ಗಗಳ ಕೆಳಗೆ ತೋಟಗಳ ನಿರ್ಮಾಣ, ಕಟ್ಟಡ ನಿರ್ಮಾಣ, ವಿದ್ಯುತ್ ಕಂಬಗಳಿಗೆ ತಂತಿ/ಹಗ್ಗ ಕಟ್ಟಿ ಬಟ್ಟೆ ಒಣಗಿಸುವುದು. ಸಾಕು ಪ್ರಾಣಿಗಳನ್ನು ಕಂಬಕ್ಕೆ ಕಟ್ಟುವುದು, ಮನೆಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಲು ಕೊಕ್ಕೆ ಹಾಕುವುದು, ವಿದ್ಯುತ್ ಮಾರ್ಗದ ಕೆಳಗೆ ಹುಲ್ಲಿನ ಬಣವೆ ಹಾಕುವುದು, ವಿದ್ಯುತ್ ಕಂಬಗಳಿಗೆ ಹಾಕಿರುವ ಆಧಾರ ತಂತಿಗಳನ್ನು ತೆಗೆಯುವುದು, ಇತ್ಯಾದಿ ಕೆಲಸಗಳನ್ನು ಮಾಡುವುದರಿಂದ ಅಪಘಾತ ಸಂಭವಿಸುತ್ತವೆ.  ವಿದ್ಯುತ್ ಕೆಲಸ/ಕಾಮಗಾರಿಗಳನ್ನು ಯಾವುದೇ ಅನಧಿಕೃತ ವ್ಯಕ್ತಿಗಳಿಂದ ಮಾಡಿಸಬಾರದು, ಇದರಿಂದ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಬೆಸ್ಕಾ ಯಾವುದೇ ರೀತಿಯ ಜವಾಬ್ದಾರಿಯಾಗುವುದಿಲ್ಲ.

ಸಂಪರ್ಕ ಸಂಖ್ಯೆಗಳು : ತುರುವನೂರು ಗಿರೀಶ್ ರೆಡ್ಡಿ 9449877348, 8762620029. ಭರಮಸಾಗರ ಕೆ.ಪಿ ಮಂಜುನಾಥಸ್ವಾಮಿ 9449876302, 9986220424. ಸಿರಿಗೆರೆ ಶ್ರೀನಿವಾಸಚಾರಿ 9916768653, 8660063351. ಹಿರೇಗುಂಟನೂರು ಆರ್. ಶಿವಯೋಗಿ 9449876261, 9741927232. ಭೀಮಸಮುದ್ರ ಹಬಿಬುಲ್ಲಾ 9449876252, 9902645247. ಪಂಡರಹಳ್ಳಿ ಬಸವಂತಪ್ಪ 9449876296, 9980420990 ಕ್ಕೆ ಸಂಪರ್ಕಿಸಬಹುದು ಎಂದು ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.