ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕು ಭರಮಸಾಗರದಲ್ಲಿ ಮೇ.19 ರಂದು 21 ಮಿ.ಮೀ ನಷ್ಟು ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ  ಮಳೆ ವಿವರ ಇಂತಿದೆ.

ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ -2 ರಲ್ಲಿ 0.7 ಮಿ.ಮೀ., ಭರಮಸಾಗರ 21, ಸಿರಿಗೆರೆ 9, ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಮಾಡದಕೆರೆ 2, ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 1.2, ಚಿಕ್ಕಜಾಜೂರು 11.6, ಹೆಚ್.ಡಿ.ಪುರ 4.4, ಮಿ.ಮೀ ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.