ಚಿತ್ರದುರ್ಗ: ಚಿತ್ರದುರ್ಗ ನಗರ ವ್ಯಾಪ್ತಿ-01 ರಲ್ಲಿ  ಜುಲೈ 20 ರಂದು 105 ಮಿ.ಮೀ ಅತಿ ಹೆಚ್ಚು ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.

    ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ- 02 ರಲ್ಲಿ 74.1 ಮಿ.ಮೀ., ಹಿರೇಗುಂಟನೂರು 6, ಭರಮಸಾಗರ 12.2, ಸಿರಿಗೆರೆ 34.2, ತುರುವನೂರು 44.8, ಐನಹಳ್ಳಿ 50.4. ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 47.8, ರಾಮಗಿರಿ 44.4, ಚಿಕ್ಕಜಾಜೂರು 37.4, ಬಿ.ದುರ್ಗ 15.2, ಹೆಚ್.ಡಿ. ಪುರ 20.4, ತಾಳ್ಯ 10.2, ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 13.8, ಬಾಗೂರು 10.3, ಮತ್ತೋಡು 20, ಶ್ರೀರಾಂಪುರ 24.2, ಮಾಡದಕೆರೆ 21.2, ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮೂರು 20, ರಾಯಾಪುರ 31.8, ಬಿ.ಜಿ. ಕೆರೆ 16, ರಾಂಪುರ 15, ದೇವಸಮುದ್ರ 5, ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 36, ಪರಶುರಾಂಪುರ 28.4, ದೇವರಮರಿಕುಂಟೆ 28.3, ತಳಕು 22.2, ನಾಯಕನಹಟ್ಟಿ 20.2, ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 07, ಬಬ್ಬೂರು 05, ಸುಗೂರು 18.4, ಇಕ್ಕನೂರು 24.2, ಈಶ್ವರಗೆರೆಯಲ್ಲಿ 22.4 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.