ಬೆಂಗಳೂರು: ಇಂದಿನ ದಿನಗಳಲ್ಲಿ ಕಂಪ್ಯೂಟರ್ ಇಲ್ಲದೆ ಯಾವುದೇ ಕೆಲಸಮಾಡಲು ಸಾಧ್ಯವಿಲ್ಲ ಅಲ್ಲವೆ ಹಾಗಾದರೆ ಎಷ್ಟು ಹೊತ್ತು ಕಂಪ್ಯೂಟರ್ ಮುಂದೆ ಕುಳಿತು ಕೆಲಸಮಾಡಬಹುದು.?

ಕೆಲವರು ತಮ್ಮ ನಿತ್ಯ ಜೀವನದಲ್ಲಿ ಸದಾ ಕಂಪ್ಯೂಟರ್ ಬಳಸುತ್ತಾರೆ. ದಿನದಲ್ಲಿ 8 ಗಂಟೆಗಳಿಗಿಂತ ಹೆಚ್ಚು ಕಾಲ ಕಂಪ್ಯೂಟರ್ ಬಳಸಿದರೆ ಕಣ್ಣು ಉರಿ, ತಲೆನೋವು ಕಾಣಿಸಿಕೊಳ್ಳುತ್ತದೆ.

ಇದನ್ನು ತಡೆಯಲು ಈ ಜಾಗ್ರತೆ ವಹಿಸಿ. ಕಂಪ್ಯೂಟರ್ ಸ್ಕ್ರೀನ್ ದೊಡ್ಡದಾಗಿ ಮಾಡಿಕೊಂಡು ಬಳಸಿ. ಇದರಿಂದ ಅಕ್ಷರ, ಸಂಖ್ಯೆಗಳು ಓದಲು ಸುಲಭವಾಗುತ್ತವೆ. ಕಣ್ಣಿಗೆ ಐ ಡ್ರಾಪ್ ಹಾಕಿ ವಿಶ್ರಾಂತಿ ನೀಡಿ, ಸ್ಕ್ರೀನ್ ಬೆಳಕನ್ನು ಕಡಿಮೆ ಇಟ್ಟುಕೊಳ್ಳಿ, 20 ನಿಮಿಷ ಕಂಪ್ಯೂಟರ್ ನೋಡಿದರೆ 20 ನಿಮಿಷ ಬೇರೆಡೆ ನೋಡಿ. ಹಾಗೂ ಕಣ್ಣನ್ನು ಕಾಪಾಡಿಕೊಳ್ಳಿ.!