ಮಂಡ್ಯ: ನಟ ಯಶ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ಆಡಿದ ಮಾತಿಗೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಖಿಲ್‍ಗೆ ಇನ್ನೂ ವಯಸ್ಸಿದೆ, ಅವರ ಅತಿರೇಕದ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಕೂಡ ಚಿತ್ರರಂಗದಲ್ಲಿದ್ದಾರೆ. ಅದೇ ರಂಗದಲ್ಲಿ ಬೆಳೆದಿರೊ ಮತ್ತೊಬ್ಬ ನಟನನ್ನು ಹಂಗಿಸಿ ಮಾತನಾಡುವುದು ಸರಿಯಲ್ಲ. ಹಿರಿಯ ನಟರಿಗೆ ಕಿಂಚಿತ್ತೂ ಗೌರವ ನೀಡದೆ ಮಾತನಾಡಿರುವುದು ಅವರ ಅಹಂಕಾರವನ್ನು ಸೂಚಿಸುತ್ತದೆ ಎಂದರು.