ಚಿತ್ರದುರ್ಗ: 66/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರ, ಚಿತ್ರದುರ್ಗದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ನಿರ್ವಹಿಸುವುದರಿಂದ ಅಕ್ಟೋಬರ್ 21 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಚಿತ್ರದುರ್ಗದಿಂದ ಸರಬರಾಜು ಆಗುವ ಎಲ್ಲಾ 66ಕೆ.ವಿ ಮಾರ್ಗ, ಐಪಿಪಿ ಸ್ಥಾವರಗಳ ಮಾರ್ಗಗಳು ಮತ್ತು 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಅಡಚಣೆಗೊಳಪಡುವ ಪ್ರದೇಶಗಳು: 66/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರ, ಚಿತ್ರದುರ್ಗ, 66 ಕೆ.ವಿ ಮಾರ್ಗ ಪಂಡರಹಳ್ಳಿ ಮಾರ್ಗ-2, ಎನ್‍ಇಜಿ ಮಾರ್ಗ 1ಮತ್ತು2 ಮಲ್ಲನಕಟ್ಟೆ, ರಾಮದಾಸ್ ಕಾಂಪೌಂಡ್, ದರ್ಜೆ ಕಾಲೋನಿ, ಜೆಸಿಆರ್ ಬಡಾವಣೆ, ಪಿ.ವಿ.ಬಡಾವಣೆ, ತರಳುಬಾಳು ನಗರ, ಗಾರೆಹಟ್ಟಿ, ಅರಣ್ಯ ಇಲಾಖೆ ಚಿತ್ರದುರ್ಗ ನಗರ, ಜೋಗಿಮಟ್ಟಿ ರಸ್ತೆ, ಬ್ಯಾಂಕ್ ಕಾಲೋನಿ, ಬಿಡಿ ರಸ್ತೆ, ದೊಡ್ಡ ಪೇಟೆ, ಚಿಕ್ಕ ಪೇಟೆ, ವಾಸವಿ ಮಹಲ್ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ರಸ್ತೆ, ಬಡಮಕಾನ್, ಮದಕರಿ ಪುರ, ಕೆಳಗೋಟೆ ಆಕಾಶವಾಣಿ, ಉದಯ ನರ್ಸಿಂಗ್ ಹೋಮ್, ಗೋಪುಲಪುರ ರಸ್ತೆ, ಹೊಳಲ್ಕೆರೆ ರಸ್ತೆ, ಮುರುಘ ರಾಜೇಂದ್ರ ಆಯಿಲ್ ಮಿಲ್, ಎಸ್.ಜೆ.ಎಂ. ತಾಂತ್ರಿಕ ವಿದ್ಯಾಲಯ, ವಿದ್ಯಾನಗರ, ಮೇದೆಹಳ್ಳಿ ರಸ್ತೆ, ಪಿ.ಕೆ.ಹಳ್ಳಿ, ಬಸವೇಶ್ವರ ನಗರ, ಆಗಸನಕಲ್ಲು, ಮಹಾವೀರ ನಗರ, ನೆಹರು ನಗರ, ಬೆಂಗಳೂರು ವಾಟರ್ ಸಪ್ಲೇ, ಬುರುಜನಹಟ್ಟಿ, ಹಿರೋ ಹೊಂಡ ಶೋ ರೂಂ ರಸ್ತೆ, ಲಕ್ಷ್ಮೀ ಬಜಾರ್, ಎಸ್.ಆರ್. ಬಡಾವಣೆ ಸೇರಿದಂತೆ ವಿದ್ಯುತ್ ಸರಬರಾಜು ಆಗುವ ಎಲ್ಲಾ 11 ಕೆ.ವಿ. ವಿದ್ಯುತ್ ಮಾರ್ಗಗಳಿಂದ ಸಂಪರ್ಕಗೊಂಡಿರುವ ಎಲ್ಲಾ ನಗರ, ಗ್ರಾಮಗಳು ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು  ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ  ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.