ಚಿತ್ರದುರ್ಗ : ನಗರದ ಶ್ರೀಮುರುಘಾಮಠದಲ್ಲಿ ದಿನಾಂಕ 13-10-18ರಂದು ಶರಣ ಸಂಸ್ಕೃತಿ ಉತ್ಸವ-2018ರ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಬೆಳಗ್ಗೆ 8.00 ಗಂಟೆಗೆ ಡಾ. ಶಿವಮೂರ್ತಿ ಮುರುಘಾ ಶರಣರು ಮತ್ತು ವಿವಿಧ ಮಠಾಧೀಶರ ನೇತೃತ್ವದಲ್ಲಿ ಗಾಂಧಿವೃತ್ತದಿಂದ ಶ್ರೀಮಠದವರೆಗೆ ಸೌಹಾರ್ದ ನಡಿಗೆ ಶರಣ ಸಂಸ್ಕೃತಿಯ ಕಡೆಗೆ ಜಾಥಾ ಕಾರ್ಯಕ್ರಮವನ್ನು ಚಲನಚಿತ್ರ ನಟ-ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಉದ್ಘಾಟಿಸುವರು. ನಟ ದರ್ಶನ್ ಮುಖ್ಯಅತಿಥಿಗಳಾಗಿ ಭಾಗವಹಿಸುವರು.

ಸಂಜೆ 6.30ಗಂಟೆಗೆ ಶ್ರೀಮಠದ ಆವರಣದಲ್ಲಿ ಜಮುರಾ ಕಪ್-2018 ಹೊನಲುಬೆಳಕಿನ ರಾಜ್ಯಮಟ್ಟದ ಆಹ್ವಾನಿತ ಪುರುಷರ ವಾಲಿಬಾಲ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದೆ. ಡಾ. ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆ ವಹಿಸಲಿದ್ದು, ಚಿತ್ರದುರ್ಗ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಕ್ರೀಡಾಕೂಟವನ್ನು ಉದ್ಘಾಟಿಸುವರು. ತಿಪಟೂರು ಶ್ರೀಷಡಕ್ಷರಮಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಶ್ರೀ ಭೋವಿಗುರುಪೀಠ, ಚಿತ್ರದುರ್ಗ ಇವರುಗಳು ಸಮ್ಮುಖ ವಹಿಸುವರು. ಮುಖ್ಯಅತಿಥಿಯಾಗಿ ಡಾ.ಬೆಟ್ಟೇಗೌಡ, ಅಧ್ಯಕ್ಷರು, ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್, ಬೆಂಗಳೂರು ಇವರು ಭಾಗವಹಿಸುವರು. ಕಾರ್ಯಕ್ರಮದ ದಾಸೋಹಿಗಳಾದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮಿಗಳು, ಶ್ರೀ ಭಗೀರಥ ಪೀಠ ಮತ್ತು ಭಕ್ತರು ಮಧುರೆ ಇವರು ಉಪಸ್ಥಿತರಿರುವರು