ಚಿತ್ರದುರ್ಗ: ಕಳೆದ ಎರಡು ಮೂರು ದಿನಗಳಿಂದ ಯೋಗ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಚರ್ಚೆಗೆ ಗ್ರಾಸವಾಗಿದ್ದ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಆದ ಹೆಚ್.ಆಂಜನೇಯರು ವಿವಾದಕ್ಕೆ ತೆರೆ ಎಳೆದರು. ನಗರದ ಹಳೇ ಮಾಧ್ಯಮಿಕ ಶಾಲ ಆವರಣದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಉದ್ಘಾಟನೆ ಮಾಡಿ ಮಾತನಾಡಿದ ಅವರು. ಬೆಳಿಗ್ಗೆ ಯಿಂದಲೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಮತ್ತು ಯೋಗವನ್ನು ಮಾಡಿದ್ದೇನೆ. ಇದಕ್ಕೆ ನೀವೇ ಸಾಕ್ಷಿ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ನನ್ನ ಕೇತ್ರಕ್ಕೆ ಸೇರಿದ ಮಲ್ಲಾಡಿಹಳ್ಳಿಯ ಸ್ವಾಮೀಜಿ ಆದ ದಿ. ರಾಘವೇಂದ್ರ ಸ್ವಾಮಿಯವರು ಯೋಗವನ್ನು ನಡೆಸಿಕೊಂಡು ಬರುತ್ತಿದ್ದರು. ಅಂತಹ ಕ್ಷೇತ್ರದಿಂದ ಆಯ್ಕೆಗೊಂಡಿರುವುದು ಸಂತೋಷದ ವಿಚಾರ. ಯೋಗ ಮಾಡುವ್ಯದರಿಂದ ಮನಸ್ಸು ನಿಗ್ರಹಗೊಳ್ಳುತ್ತದೆ. ನಮ್ಮ ರೈತರು, ಪೌರಕಾರ್ಮಿಕರು ಬೆಳಿಗ್ಗೆ ಎದ್ದು ಅವರವರ ಕಾಯಕದಲ್ಲಿ ಮಗ್ನರಾಗಿ ಅದರಿಂದಲೇ ಯೋಗವನ್ನು ಮಾಡುತ್ತಾರೆ. ಯಾರು ರಟ್ಟೆ ಮುರಿದು ಬೆವರು ಹರಿಸಿ ಕೆಲಸಮಾಡುತ್ತಾರೆ ಅವರಿಗೆ ಸಾಮಾನ್ಯವಾಗಿ ಖಾಯಿಲೆಗಳು ಬರುವುದಿಲ್ಲ. ಹಾಗಾಗಿ ಇಂದಿನ ಜೆಂಜಾಟದಲ್ಲಿ ದಿನಕ್ಕೊಮ್ಮೆ ಯೋಗಮಾಡುವುದರಿಂದ ಆರೋಗ್ಯ ಸುದಾರಿಸುತ್ತದೆ ಸಕ್ಕರೆ, ಬೀಪಿ ಅಂತ ಖಾಯಿಲೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳ ಬಹುದೆಂದರು.
ಬೆಳಿಗ್ಗೆ ಯಿಂದಲೆ ಮಹಿಳೆಯರು, ಮಕ್ಕಳು ಸೇರಿದಂತೆ, ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಗಿರಿಜಾನಕಲ್, ಜಿಲ್ಲಾಧಿಕಾರಿ ಶ್ರೀರಂಗಯ್ಯ ಸೇರಿಂದತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಾರ್ಥರಾಜನ್ ಭಾಗವಹಿಸಿದ್ದರು.