ಹೊಸದುರ್ಗ: ಸರಳತೆಯ, ಗೋ ಆಧಾರಿತ ಕೃಷಿಯ ರಾಸಾಯನಿಕ ಮುಕ್ತ ಕೃಷಿಯ ಹರಿಕಾರ ನಮ್ಮ ಗುರುಗಳು ಅದ  ನಾಡೋಜ ಡಾಕ್ಟರ್ ನಾರಾಯಣ ರೆಡ್ಡಿ ವಿಧಿವಶರಾಗಿದ್ದಾರೆ. ಅವರಿಗೆ ಶಾಂತವೀರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

 ರೈತ ಸಮೂಹಕ್ಕೆ ಮಾದರಿಯಾಗಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿ ರೈತರಿಗೆ ಒಂದು ವಿಶ್ವವಿದ್ಯಾಲಯಕ್ಕಿಂತ ಹೆಚ್ಚಿನ ಜ್ಞಾನಾರ್ಜನೆ ಕೊಡುತ್ತಿದ್ದ ಅವರ ಕೊಡುಗೆ ಅವಿಸ್ಮರಣೀಯ ಎಂದ ಶ್ರೀಗಳು.ಇಳಿ ವಯಸ್ಸಿನಲ್ಲೂ ಅವರು ತರಬೇತಿ ಕಾರ್ಯಕ್ರಮ ಗಳನ್ನು ನಡೆಸುತ್ತಾ ಎಲ್ಲಾ ರೈತ ಸಮೂಹಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು.

ಅವರ ಜ್ಞಾನದ ಪುಸ್ತಕಗಳು, ಹಂಚಿದ ಜ್ಞಾನ ಕೋಟ್ಯಂತರ ರೈತರಿಗೆ ಮಾದರಿಯಾಗಿ ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗುತ್ತಾ ಅವರಿಗೆ ಗೌರವ ಪೂರ್ವಕ ವಿದಯಾಗಳ ಅರ್ಪಿಸೋಣ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಹೇಳಿಕೆಯನ್ನು ನೀಡಿದ್ದಾರೆ.