ಹುಬ್ಬಳ್ಳಿ: ನಮ್ಮ ಸರಕಾರ ರೈತರ ಪರ ಹಾಗಾಗಿ ಸಿಎಂ ಕುಮಾರಸ್ವಾಮಿ ಅವರು ಕಬ್ಬು ಬೆಳೆಗಾರರೊಂದಿಗೆ  ಚರ್ಚೆ ನಡೆಸಿಯೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರೈತರ ಪರವಾಗಿಯೇ ನಮ್ಮ ಸರ್ಕಾರ ನಿಂತಿದೆ, ಕೆಲ ಸಕ್ಕರೆ ಕಾರ್ಖಾನೆಗಳು ಹಣ ಬಾಕಿ ಉಳಿಸಿಕೊಂಡಿವೆ ಈ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳುವೆವು ಎಂದು ಕಾಶೆಂಪುರ ಹೇಳಿದರು.