ಹೊಳೆನರಸೀಪು; ಏಳ್ಗೆಯನ್ನು ಕಂಡು ಅಸೂಯೆ ಪಡುವ ಈ ಕಾಲದಲ್ಲಿ ನಾವು ಇಷ್ಟು ಶಕ್ತಿ ಹೊಂದಲು ಬೆಟ್ಟದ ರಂಗನಾಥ ಸ್ವಾಮಿಯೇ ಕಾರಣ ಎಂದು ಜೆಡಿಎಸ್ ವರಿಷ್ಠ ಎಚ್​.ಡಿ. ದೇವೇಗೌಡ ಹೇಳಿದ್ದಾರೆ.

ಹೊಳೆನರಸೀಪುರದ ಮಹಿಳಾ ಕಾಲೇಜಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಯಾರಾದರು ಊಹಿಸಿದ್ದರಾ? ನಾವು ಈ ಸ್ಥಾನಕ್ಕೆ ಏರಲು ಈಶ್ವರನ ಕೃಪೆಯೇ ಕಾರಣ. ಆ ದೇವರ ಆಶೀರ್ವಾದ ಇಲ್ಲದ್ದೆ ನಮ್ಮ ಕುಟುಂಬ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಹೇಳಿದರು.