ಚಿತ್ರದುರ್ಗ: ಶರಣ ಸಂಸ್ಕೃತಿಯನ್ನು ಗರ್ಭೀಕರಿಸಿಕೊಂಡಿರುವ ಪರಂಪರೆ ನಮ್ಮದು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದಲ್ಲಿ ಲಿಂಗೈಕ್ಯಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ೨೪ನೇ ಸ್ಮರಣೋತ್ಸವದ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತ, ಬೆಂಗಾಡಿಗಿದ್ದ ನಾಡನ್ನು ಭಕ್ತಿಯ ನಾಡನ್ನಾಗಿ ಮಾಡಿದವರು ಶ್ರೀ ಮುರುಗಿ ಶಾಂತವೀರಸ್ವಾಮಿಗಳು. ಮಲ್ಲಿಕಾರ್ಜುನ ಶ್ರೀಗಳ ವಿದ್ವತ್ತಿನ ಸಂಚಾರ ವಿದ್ಯುತ್ತಿನಂತೆ ಕೆಲಸ ಮಾಡುತ್ತಿತ್ತು. ಮಾನವನ ಮೆದುಳನ್ನು ಪ್ರಕಾಶಗೊಳಿಸುವುದರಲ್ಲಿ ಅವರು ಪ್ರಖ್ಯಾತಿ ಪಡೆದಿದ್ದರು. ಮಲ್ಲಿಕಾರ್ಜುನ ಸ್ವಾಮಿಗಳು ಲೋಕ ಕಲ್ಯಾಣದಲ್ಲಿ ಮುಂದುವರಿದುಕೊಂಡು ಹೋಗುವಂತೆ ಶೈಕ್ಷಣಿಕ ಶಾಲಾ-ಕಾಲೇಜುಗಳನ್ನು ತೆರೆದು ಬರದ ನಾಡಿಗೆ ಅಕ್ಷರಕ್ರಾಂತಿಯ ಮಳೆಗರೆದರು. ಶ್ರೀಮಠದಿಂದ ಲಕ್ಷಾಂತರಜನರಿಗೆ ಬದುಕನ್ನು ಕಟ್ಟಿಕೊಳ್ಳಲು ಸಾದ್ಯವಾಗಿದೆ.ಸ್ವಾಮೀಜಿಗಳಲ್ಲಿ ಮೂರುತರಹದ ಶಕ್ತಿ ಇರಬೇಕು.ಧೀ.ಶಕ್ತಿ ಇರಬೇಕು.ಸಾತ್ವಿಕವಾಗಿರುವ ಶಕ್ತಿ ಇರಬೇಕು.ಈ ಶಕ್ತಿ ಇರುವವರುಕರ್ತ್ರೃತ್ವ ಶಕ್ತಿಯನ್ನು ಪಡೆಯುತ್ತಾರೆ.ಅಂದರೆಎಲ್ಲವನ್ನು ನಿಭಾಯಿಸುವ ಶಕ್ತಿ ಪಡೆಯುವುದು.ಮಲ್ಲಿಕಾರ್ಜುನ ಸ್ವಾಮಿಗಳು ಜನರನ್ನು ಸುಶಿಕ್ಷಿತರನ್ನಾಗಿ ಮಾಡಿದ್ದಾರೆ. ಶ್ರೀಮಠ ತ್ರಿವಿಧದಾಸೋಹವನ್ನು ನಡೆಸುತ್ತ ಬಂದಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ತುಮಕೂರು ಶ್ರೀ ಸಿದ್ಧಗಂಗಾಮಠದ ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಸ್ವಾಮಿಗಳುಸಮ್ಮುಖವನ್ನು ವಹಿಸಿದ್ದರು.

ಬೆಂಗಳೂರು ಶ್ರೀ ಸರ್ಪಭೂಷಣಮಠದ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಮಾಡಾಳು ವಿರೂಪಾಕ್ಷಪ್ಪ, ಹೊಳಲ್ಕೆರೆಯ ಶಾಸಕಎಂ.ಚಂದ್ರಪ್ಪ ಕಡೂರು ಶಾಸಕ ಬೆಳ್ಳಿಪ್ರಕಾಶ್ ಕಾರ್‍ಯಕ್ರಮದಲ್ಲಿ ಬೆಂಗಳೂರು ಗಂಜಾಂಮಠದಶ್ರೀ ಮ.ನಿ.ಪ್ರ.ಚಿದ್ಛನಸ್ವಾಮಿಗಳು,ಕನಕಪುರ ಮರಳೇಗವಿ ಮಠದಡಾ.ಮುಮ್ಮಡಿ ಶಿವರುದ್ರಸ್ವಾಮಿಗಳು, ರಾವಂದೂರು ಶ್ರೀ ಮುರುಘಾಮಠದ ಶ್ರೀ.ಮ.ನಿ.ಪ್ರ.ಮೋಕ್ಷಪತಿ ಸ್ವಾಮಿಗಳು, ಹೆಬ್ಬಾಳು ಶ್ರೀ ರುದ್ರೇಶ್ವರ ವಿರಕ್ತಮಠದ ಶ್ರೀ.ಮ.ನಿ.ಪ್ರ.ಮಹಾಂತರುದ್ರೇಶ್ವರ ಸ್ವಾಮಿಗಳು,ಚನ್ನಗಿರಿ ಶ್ರೀ ಹಾಲಸ್ವಾಮಿ ವಿರಕ್ತ ಮಠದ ಶ್ರೀ.ಮ.ನಿ.ಪ್ರ.ಜಯದೇವಸ್ವಾಮಿಗಳು, ಶರಣ ಸಂಸ್ಕೃತಿಉತ್ಸವ ೨೦೧೮ರ ಗೌರಾವಧ್ಯಕ್ಷರಾದ ಮಧುರೆ ಹೊಸದುರ್ಗದ ಶ್ರೀಭಗೀರಥ ಪೀಠದ ಜ.ಶ್ರೀ.ಪುರುಷೋತ್ತಮನಂದಪುರಿ ಮಹಾಸ್ವಾಮಿಗಳು, ಹರಗುರುಚರಮೂರ್ತಿಗಳು, ಶರಣ ಸಂಸ್ಕೃತಿಉತ್ಸವದಕಾರ್ಯಾದ್ಯಕ್ಷರಾದ ಪಟೇಲ್ ಶಿವಕುಮಾರ್,ಮಾಜಿ ಶಾಸಕರುಗಳಾದ ಶ್ರೀ ಎಂ.ಬಿ.ತಿಪ್ಪೇರುದ್ರಪ್ಪ, ಶ್ರೀ ಟಿ.ಹೆಚ್.ಬಸವರಾಜ್, ಶ್ರೀ ಪಿ.ರಮೇಶ್, ಶ್ರೀ ಎ.ವಿ.ಉಮಾಪತಿ, ವೈದ್ಯರಾದಡಾ.ನಾಗರಾಜ್.ಬಿ.ಸಜ್ಜನ್‌ಹೊಳಲ್ಕೆರೆ ಪಟ್ಟಣ ಪಂಚಾಯತಿಅಧ್ಯಕ್ಷರಾದ ಸವಿತಾ ಬಸವರಾಜ್, ಹಾಗೂ ಸದಸ್ಯರುಉಪಸ್ಥಿತರಿದ್ದರು