ಚಳ್ಳಕೆರೆ: ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೊ ಎಂದು ಖ್ಯಾತರಾದ ನಟ ಶಿವರಾಜ್‌ಕುಮಾರವರ ೫೪ನೇ ಹುಟ್ಟು ಹಬ್ಬವನ್ನು ಇಲ್ಲಿನ ಬಿಎಂ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಅವರ ಅಭಿಮಾನಿ ಬಳಗ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಿದರು.

ಗಾಂಧಿನಗರದ ಯುವ ಶಿವಯುವ ಬಳಗದಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಿವರಾಜ್‌ಕುಮಾರ್‌ರವರ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು. ಶಿವರಾಜ್ ಕುಮಾರ್ ನಟಿಸಿದ ವಿವಿಧ ಚಿತ್ರಗಳ ಭಾವಚಿತ್ರವಿರುವ ದೊಡ್ಡದಾದ ಬ್ಯಾನರ್ ನಿರ್ಮಿಸಿ ಅದನ್ನು ಮೆರವಣಿಗೆ ಮೂಲಕ ಕೊಂಡ್ಯೊಯಲಾಯಿತು. ಬಳಗದ ನೇತಾತ್ರೇಯ(ಗುಂಡ) ಮಾತನಾಡಿ, ಶಿವರಾಜ್‌ಕುಮಾರ್ ಅಭಿನಯ ಎಲ್ಲಾ ಸಮೂಹದವರ ವಿಶ್ವಾಸವನ್ನು ಗೆದ್ದಿದೆ. ಅವರು ನೀಡುವ ಎಲ್ಲಾ ಚಿತ್ರಗಳು ಸಮಾಜಕ್ಕೆ ಮಾರ್ಗದರ್ಶನವಾಗಿವೆ. ಭಾವನಾತ್ಮಕ ಅಭಿನಯಗಳ ಶಿವರಾಜ್‌ಕುಮಾರ್ ಪಾತ್ರಳಿಗೆ ಶಿವರಾಜ್‌ಕುಮಾರ್ ಜೀವತುಂಬುತ್ತಾರೆ. ಇಂತಹ ನಟ ಇನ್ನೂ ನೂರು ಕಾಲ ಬಾಳಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಎಂ.ರಾಜು, ಚನ್ನಕೇಶವ, ಎಸ್.ಮನುದೊರೆ, ಎಂ.ಪಿ.ಕೋಟೇಶ್, ರಾಜೇಂದ್ರಬಾಬು, ಕೆ.ಮಂಜುನಾಥ, ಪ್ರವೀಣ್, ಎನ್.ಕೆ.ಮಂಜುನಾಥ, ಸಾಗರ್ ಮತ್ತು ಮಂಜು ಭಾಗವಹಿಸಿದ್ದರು