ಚಿತ್ರದುರ್ಗ: ನಗರದಲ್ಲಿ ಬಹುಸಂಖ್ಯಾತ ಲಿಂಗಾಯಿತ ಮತದಾರರು 45,000 ಕ್ಕೂ ಹೆಚ್ಚು ಇದ್ದು ಆದರೂ ಸಹ ಎಲ್ಲ ಪಕ್ಷಗಳು 2-3 ಸ್ಥಾನ ಸಹ ನೀಡಿರುವುದಿಲ್ಲ. ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಸಹ ಲಿಂಗಾಯಿತ ಸಮಾಜಕ್ಕೆ ಅನ್ಯಾಯ ಮಾಡಿರುತ್ತಾರೆ ಎಂದು ಕೆ.ಇ.ಬಿ.ಷಣ್ಮುಖಪ್ಪ ಹೇಳಿದ್ದಾರೆ.

ಹಿಂದೆ ಚಿತ್ರದುರ್ಗ ನಗರಸಭೆಯಲ್ಲಿ 9 ಜನ ಲಿಂಗಾಯಿತ ಸಮುದಾಯದ ಸದಸ್ಯರಿದ್ದರು. ಕಳೆದ ಬಾರಿಯಿಂದ ಇಬ್ಬರು ಸದಸ್ಯರು ಮಾತ್ರ ಆಯ್ಕೆಯಾಗಿದ್ದಾರೆ. ಈ ಸಾಲಿನಲ್ಲಿ 4,5,7,8,9,12,16,17,18, 20,21,23,24,26,27,29,33 ಇಷ್ಟು ಸಾಮಾನ್ಯ ಮತ್ತು ಸಾಮಾನ್ಯ ಮಹಿಳೆ ಇದ್ದು ಮತ್ತು ಈ ವಾರ್ಡ್‍ಗಳಲ್ಲಿ ಲಿಂಗಾಯಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಆದರೂ ಸಹ ಲಿಂಗಾಯಿತ ಸಮಾಜಕ್ಕೆ ಮೂರು ಪಕ್ಷಗಳು ಸಹ ಅನ್ಯಾಯ ಮಾಡಿರುತ್ತಾರೆ. ಇದನ್ನು ಲಿಂಗಾಯಿತ ಸಮುದಾಯ ಖಂಡಿಸುತ್ತದೆ ಎಂದು ಕೆ.ಇ.ಬಿ. ಷಣ್ಮುಖಪ್ಪ ಹೇಳಿದ್ದಾರೆ.