ಚಿತ್ರದುರ್ಗ: ಸಂತೆಮೈದಾನದ ರಸ್ತೆಯಲ್ಲಿರುವ ಬಾಲಾಜಿ ಎಂಟರ್ ಪ್ರೈಸಸ್ ಸೇರಿದಂತೆ ಮೂರ್ನಾಲ್ಕು ಕಡೆ ನಗರಸಭೆಯವರು ಮಂಗಳವಾರ ದಿಢೀರ್ ದಾಳಿ ನಡೆಸಿ ಅಪಾರ ಪ್ರಮಾಣದ ಪ್ಲಾಸ್ಟಿಕ್ ಐಟಂಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರಸಭೆ ಪೌರಾಯುಕ್ತರಾದ ಚಂದ್ರಪ್ಪನವರ ನೇತೃತ್ವದಲ್ಲಿ ಹೆಲ್ತ್ ಇನ್ಸ್‍ಪೆಕ್ಟರ್‍ಗಳಾದ ಸರಳ, ಭಾರತಿ, ಕಾಂತರಾಜ್ ಇವರುಗಳು ಬಾಲಾಜಿ ಎಂಟರ್ ಪ್ರೈಸಸ್‍ನಲ್ಲಿ ಲೋಡ್‍ಗಟ್ಟಲೆ ಪ್ಲಾಸ್ಟಿಕ್ ಲೋಟ್, ಕವರ್ ಇನ್ನು ಅನೇಕ ಸಾಮಾಗ್ರಿಗಳನ್ನು ವಶಪಡಿಸಿಕೊಂಡು ಕೇಸು ದಾಖಲಿಸುವಂತೆ ಪಲೂಷನ್ ಕಂಟ್ರೋಲ್ ಬೋರ್ಡ್‍ಗೆ ಶಿಫಾರಸ್ಸು ಮಾಡಿದ್ದಾರೆ.

ಊಟದ ತಟ್ಟೆ, ನೀರು, ಕಾಫಿ ಲೋಟ, ಟೇಬಲ್ ಮೇಲೆ ಹಾಸುವ ಪ್ಲಾಸ್ಟಿಕ್ ಶೀಟ್, ಥರ್ಮಕೋಲ್ ಹೀಗೆ ಪ್ರತಿಯೊಂದು ಪ್ಲಾಸ್ಟಿಕ್ ಐಟಂಗಳನ್ನು ವಶಕ್ಕೆ ತೆಗೆದುಕೊಂಡ ನಗರಸಭೆ ಸಿಬ್ಬಂದಿ ಬಾಲಾಜಿ ಎಂಟರ್ ಪ್ರೈಸಸ್ ಹಾಗೂ ಸ್ಟೇಡಿಯಂಗೆ ಹೋಗುವ ರಸ್ತೆ ತಿರುವಿನ ಕಾರ್ನರ್‍ನಲ್ಲಿರುವ ಮನೋಹರ್ ಸ್ಟೋರ್ಸ್‍ನ್ನು ಲಾಕ್ ಮಾಡಿದ್ದಾರೆ.

ಪರಿಸರ ಇಂಜಿನಿಯರ್ ಜಾಫರ್, ಆರೋಗ್ಯ ನಿರೀಕ್ಷಕರುಗಳಾದ ಮಂಜು, ಅಶೋಕ, ಕಂದಾಯಾಧಿಕಾರಿ ವಸೀಂ ದಾಳಿ ಸಂದರ್ಭದಲ್ಲಿ ಹಾಜರಿದ್ದರು.