ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಕಾರ‍್ಯಗಳು ನಡೆಯುತ್ತಿದ್ದಾವೆ. ಈ ನಡುವೆ ಬಾಹುಬಲಿ ಬೆಟ್ಟದ ಅಡಿಯಲ್ಲಿ ಹಾಕಲಾಗಿದ್ದ ಚಪ್ಪರ ಕುಸಿದ ಘಟನೆ ನಡೆದಿದ್ದು, ಚಪ್ಪರದ ಅಡಿಯಲ್ಲಿ ಹಲವು ಮಂದಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಘಟನ ಸ್ಥಳಕ್ಕೆ ಫೊಲೀಸ್ ಸಿಬ್ಬಂದಿ, ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದು ರಕ್ಷಣ ಕಾರ‍್ಯದಲ್ಲಿ ತೊಡಗಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ.